ನಮ್ಮ ಅಡುಗೆಮನೆಯಲ್ಲಿರುವ ಪದಾರ್ಥಗಳನ್ನು ಸರಿಯಾದ ಜೋಡಿಯಲ್ಲಿ ಸೇವಿಸಿದರೆ ಅವು ಕೇವಲ ಆಹಾರವಾಗಿ ಉಳಿಯದೆ ಸಂಜೀವಿನಿಯಂತೆ ಕೆಲಸ ಮಾಡುತ್ತವೆ ಎಂಬುದು ನಿಮಗೆ ಗೊತ್ತೇ? ಆಯುರ್ವೇದದ ಪ್ರಕಾರ ದೇಹದ ವಾತ, ಪಿತ್ತ ಮತ್ತು ಕಫ ದೋಷಗಳನ್ನು ಸರಿಪಡಿಸಲು ಈ ಕೆಳಗಿನ ‘ಫುಡ್ ಕಾಂಬಿನೇಷನ್ಸ್’ ಅತ್ಯಂತ ಪರಿಣಾಮಕಾರಿ. ನಮ್ಮ ದೇಹದ ದೋಷಗಳನ್ನು (ವಾತ, ಪಿತ್ತ, ಕಫ) ಸಮತೋಲನದಲ್ಲಿಡಲು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಾಯ ಮಾಡುವ ಅಂತಹ ಕೆಲವು ಬೆಸ್ಟ್ ಫುಡ್ ಕಾಂಬೋಸ್ ಇಲ್ಲಿವೆ.ನಿಮ್ಮ ಲೈಫ್ಸ್ಟೈಲ್ ಬದಲಿಸಿಕೊಳ್ಳಲು ಇಂದೇ ಈ ಟಿಪ್ಸ್ ಫಾಲೋ ಮಾಡಿ.
ಯಾವ ಕಾಂಬೋ ಹೇಗೆ ಕೆಲಸ ಮಾಡುತ್ತದೆ?
ಖರ್ಜೂರ + ಹಸುವಿನ ತುಪ್ಪ (ಎನರ್ಜಿ ಬೂಸ್ಟರ್): ದಿನವಿಡೀ ಆಕ್ಟಿವ್ ಆಗಿರಲು ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟದ ಜೊತೆ 3-4 ಖರ್ಜೂರವನ್ನು 1-2 ಚಮಚ ಹಸುವಿನ ತುಪ್ಪದೊಂದಿಗೆ ಸೇವಿಸಿ. ಇದು ದೇಹಕ್ಕೆ ಇನ್ಸ್ಟಂಟ್ ಎನರ್ಜಿ ನೀಡುವ ಜೊತೆಗೆ ಸ್ನಾಯುಗಳನ್ನು ಬಲಪಡಿಸಿ ಮೈಕಟ್ಟು ಗಟ್ಟಿಗೊಳಿಸುತ್ತದೆ. ದೌರ್ಬಲ್ಯ ನಿವಾರಿಸಿ ಸಪ್ತ ಧಾತುಗಳನ್ನು ವೃದ್ಧಿಸುವ ಈ ಕಾಂಬೋ, ಬೊಜ್ಜು ಹೆಚ್ಚಿಸದೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ನೈಸರ್ಗಿಕ ಮದ್ದಾಗಿದೆ.
ಶುಂಠಿ + ಸೈಂಧವ ಲವಣ : ಒಂದು ಸಣ್ಣ ಹಸಿ ಶುಂಠಿಯ ತುಂಡು ಮತ್ತು ಒಂದು ಚಿಟಿಕೆ ಸೈಂಧವ ಲವಣ (Rock Salt).ಶುಂಠಿಯ ಮೇಲಿನ ಸಿಪ್ಪೆಯನ್ನು ತೆಗೆದು, ಅದರ ಮೇಲೆ ಸ್ವಲ್ಪ ಸೈಂಧವ ಲವಣವನ್ನು ಉದುರಿಸಿ.ಊಟ ಮಾಡಲು ಕುಳಿತುಕೊಳ್ಳುವ 15-20 ನಿಮಿಷಗಳ ಮೊದಲು ಇದನ್ನು ನಿಧಾನವಾಗಿ ಜಗಿದು ತಿನ್ನಬೇಕು.ಊಟಕ್ಕೆ ಮೊದಲು ಶುಂಠಿ ಸೇವಿಸುವುದರಿಂದ ಹೊಟ್ಟೆಯಲ್ಲಿ ವಾಯು (Gas) ಶೇಖರಣೆಯಾಗುವುದನ್ನು ತಡೆಯಬಹುದು. ಇದು ಹೊಟ್ಟೆ ಭಾರವಾಗುವ ಸಮಸ್ಯೆಯನ್ನು ದೂರ ಮಾಡುತ್ತದೆ.ನಾಲಿಗೆಯ ಮೇಲಿರುವ ರುಚಿ ಮೊಗ್ಗುಗಳನ್ನು (Taste buds) ಇದು ಸಕ್ರಿಯಗೊಳಿಸುತ್ತದೆ, ಇದರಿಂದ ನೀವು ಸೇವಿಸುವ ಆಹಾರ ಇನ್ನು ಹೆಚ್ಚು ರುಚಿಕರವಾಗಿ ಅನುಭವಕ್ಕೆ ಬರುತ್ತದೆ.
https://www.instagram.com/p/DSc6ku6jeMR/?utm_source=ig_web_copy_link
ಬೆಲ್ಲ + ಹುರಿದ ಕಡಲೆ : ಬೆಲ್ಲದಲ್ಲಿ ನೈಸರ್ಗಿಕವಾಗಿ ಕಬ್ಬಿಣದ ಅಂಶ (Iron) ಹೇರಳವಾಗಿದೆ ಮತ್ತು ಕಡಲೆಯಲ್ಲಿ ಪ್ರೋಟೀನ್ ಇದೆ. ಇವೆರಡೂ ಸೇರಿದಾಗ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ವೇಗವಾಗಿ ಹೆಚ್ಚುತ್ತದೆ.ಕಡಲೆಯಲ್ಲಿರುವ ‘ಜಿಂಕ್’ ಮತ್ತು ‘ಪ್ರೋಟೀನ್’ ಕೂದಲಿನ ಬುಡವನ್ನು ಗಟ್ಟಿಗೊಳಿಸಿದರೆ, ಬೆಲ್ಲದಲ್ಲಿರುವ ಕಬ್ಬಿಣದ ಅಂಶವು ನೆತ್ತಿಯ ಭಾಗಕ್ಕೆ ರಕ್ತ ಸಂಚಾರವನ್ನು ಸುಧಾರಿಸುತ್ತದೆ.ನಿಯಮಿತವಾಗಿ ಸೇವಿಸಿದರೆ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿ.ಕಡಲೆಯಲ್ಲಿ ಫೈಬರ್ (ನಾರಿನಂಶ) ಹೆಚ್ಚಿರುವುದರಿಂದ ಇದನ್ನು ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ಮೆಟಾಬಾಲಿಸಂ ಹೆಚ್ಚಿಸುತ್ತದೆ.
ನೆಲ್ಲಿಕಾಯಿ + ಕಲ್ಲು ಸಕ್ಕರೆ : ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಮತ್ತು ಕಲ್ಲುಸಕ್ಕರೆ ಪುಡಿ ಸೇವಿಸಿದರೆ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುವುದಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ, ಕೂದಲು ಅಕಾಲಿಕವಾಗಿ ನರೆಯುವುದನ್ನು (Premature Greying) ತಡೆಯುತ್ತದೆ ಮತ್ತು ಕೂದಲಿಗೆ ನೈಸರ್ಗಿಕ ಹೊಳಪು ನೀಡುತ್ತದೆ.
ಶುಂಠಿ ಪುಡಿ + ಬೆಚ್ಚಗಿನ ನೀರು; ಒಂದು ಲೋಟ ಬೆಚ್ಚಗಿನ ನೀರಿಗೆ ಕಾಲು ಅಥವಾ ಅರ್ಧ ಚಮಚ ಒಣ ಶುಂಠಿ ಪುಡಿ ದಿನವಿಡೀ ಈ ನೀರನ್ನು ಸ್ವಲ್ಪ ಸ್ವಲ್ಪವಾಗಿ (Sip by Sip) ಕುಡಿಯುತ್ತಿರಿ.ನವಿಡೀ ಇದನ್ನು ಸಿಪ್ ಮಾಡುವುದರಿಂದ ದೇಹದಲ್ಲಿ ಶೇಖರಣೆಯಾಗಿರುವ ‘ಆಮ’ (ವಿಷಕಾರಿ ಅಂಶಗಳು) ಹೊರಹೋಗುತ್ತವೆ. ಇದು ರಕ್ತವನ್ನು ಶುದ್ಧೀಕರಿಸಲು ಸಹಕಾರಿ.ಒಣ ಶುಂಠಿಯಲ್ಲಿ ಆಂಟಿ-ಇನ್ಫ್ಲಮೇಟರಿ ಗುಣಗಳಿರುವುದರಿಂದ, ಕೀಲು ನೋವು ಅಥವಾ ಮೈಕೈ ನೋವಿನಿಂದ ಬಳಲುವವರಿಗೆ ಇದು ಹೆಚ್ಚಿನ ಶಮನ ನೀಡುತ್ತದೆ.ಸದಾ ಕಾಲ ಕಾಡುವ ಶೀತ, ಕೆಮ್ಮು ಮತ್ತು ಗಂಟಲಿನಲ್ಲಿನ ಕಿರಿಕಿರಿಯನ್ನು ಈ ಶುಂಠಿ ನೀರು ತಕ್ಷಣವೇ ನಿಯಂತ್ರಿಸುತ್ತದೆ.

