HomeLive NewsSHOCKING: ಆಸ್ತಿ ಕಲಹ: ವಾಯುಪಡೆಯ ನಿವೃತ್ತ ಅಧಿಕಾರಿಯನ್ನೇ ಗುಂಡಿಟ್ಟು ಹತ್ಯೆಗೈದ ಪುತ್ರರು

SHOCKING: ಆಸ್ತಿ ಕಲಹ: ವಾಯುಪಡೆಯ ನಿವೃತ್ತ ಅಧಿಕಾರಿಯನ್ನೇ ಗುಂಡಿಟ್ಟು ಹತ್ಯೆಗೈದ ಪುತ್ರರು

ಘಾಜಿಯಾಬಾದ್: ಆಸ್ತಿಗಾಗಿ ಇಬ್ಬರು ಗಂಡು ಮಕ್ಕಳು, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯನ್ನೇ ಗುಂಡಿಟ್ತು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.

ವಾಯುಪಡೆಯ ನಿವೃತ್ತ ಸಿಬ್ಬಂದಿ ಯೋಗೇಶ್ ಕುಮಾರ್ ತಮ್ಮ ನಿವಾಸಕ್ಕೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಡಿಸೆಂಬರ್ 26ರಂದು ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಯೋಗೇಶ್ ಕುಮಾರ್ ಮೃತಪಟ್ಟಿದ್ದರು. ತನಿಖೆ ವೇಳೆ ಯೋಗೇಶ್ ಕುಮಾರ್ ಅವರ ಇಬ್ಬರು ಪುತ್ರರೇ ಸುಪಾರಿ ಕೊಟ್ಟು ತಂದೆತ್ಯನ್ನು ಕೊಲ್ಲಿಸಿರುವುದು ಬಯಲಾಗಿದೆ.

ಮಕ್ಕಳಾದ ನಿತೀಶ್ ಹಾಗೂ ಗುಡ್ಡು ತಮ್ಮ ಮನೆಗಳನ್ನು ಮಾರಾಟ ಮಾಡುವಂತೆ ತಂದೆ ಯೋಗೇಶ್ ಒತ್ತಾಯಿಸಿದ್ದಾರೆಂದು ಪೊಲೀಸರಿಗೆ ಈ ಹಿಂದೆ ದೂರು ನೀಡಿದ್ದರು. ಇದೀಗ ಮತ್ತೆ ಆಸ್ತಿ ವಿಚಾರವಾಗಿಯೇ ಗಲಾಟೆ ನಡೆದಿತ್ತು. ಇಬ್ಬರು ಮಕ್ಕಳು ತಮ್ಮ ನೆರೆಮನೆಯ ಅರವಿಂದ್ ಕುಮಾರ್ ಎಂಬಾತನಿಗೆ ತಂದೆ ಯೋಗೆಶ್ ಕುಮಾರ್ ಹತ್ಯೆ ಮಾಡಲು ೫ ಲಕ್ಷ ರೂ ಸುಪಾರಿ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರವಿಂದ್ ಕುಮಾರ್ ತನ್ನ ಸೋದರ ಮಾವ ನವೀನ್ ಜೊತೆ ಸೇರಿ ಯೋಗೇಶ್ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯೋಗೇಶ್ ಕುಮಾರ್ ಗೆ ಅವರ ಮಕ್ಕಳೇ ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದರು. ಅಲ್ಲದೇ ಅರವಿಂದ್ ಹಾಗೂ ನವೀನ್ ಇಬ್ಬರೂ ಯೋಗೇಶ್ ಮೇಲೆ ಎರಡು ಗುಂಡು ಹಾರಿಸಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆಗೆ ಬಳಸಿದ್ದ ಪಿಸ್ತೂಲ್, ಲೈವ್ ಕಾರ್ಟ್ರಿಡ್ಜ್ ಗಳು, ಕಬ್ಬಿಣದ ಪೈಪ್ ಹಾಗೂ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular