ಹಾವೇರಿ: ತಂದೆಯ ಅಂತ್ಯಕ್ರಿಯೆ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ ನಡೆದಿದೆ.
ಹಾವೇರಿ ತಾಲೂಕಿನ ಹೊಂಬರಡಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಂಜುನಾಥ್ ಮುದ್ದಿನವರ(40) ಕೊಲೆ ಮಾಡಲಾಗಿದೆ.
ಎಣ್ಣೆ ನಶೆಯಲ್ಲಿ ಸ್ನೇಹಿತನನ್ನೇ ಶಿವಕುಮಾರ್ ಶಿವಪುರ ಕೊಲೆ ಮಾಡಿದ್ದಾನೆ. ಡಿಸೆಂಬರ್ 30ರಂದು ಹೃದಯಾಘಾತದಿಂದ ಮಂಜುನಾಥ ತಂದೆ ರಾಜೇಂದ್ರ ನಿಧನರಾಗಿದ್ದು, ತಂದೆ ಅಂತ್ಯಕ್ರಿಯೆ ಮುಗಿಸಿಸಿಕೊಂಡು ಬರುತ್ತಿದ್ದ ಮಂಜುನಾಥ್ ಸ್ನೇಹಿತ ಶಿವಕುಮಾರನೊಂದಿಗೆ ಮದ್ಯ ಸೇವನೆ ಮಾಡಿದ್ದಾನೆ. ಮದ್ಯದ ನಶೆಯಲ್ಲಿ ಇಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಂಜುನಾಥನನ್ನು ಶಿವಕುಮಾರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

