HomeKarnatakaಶಿಕ್ಷಕರು, ಉಪನ್ಯಾಸಕರ ಮಕ್ಕಳಿಗೆ ಗುಡ್ ನ್ಯೂಸ್: ವಿದ್ಯಾರ್ಥಿ ವೇತನ ಮಂಜೂರು ಮಾಡಲು ಪ್ರತಿಭಾವಂತರಿಂದ ಅರ್ಜಿ ಆಹ್ವಾನ

ಶಿಕ್ಷಕರು, ಉಪನ್ಯಾಸಕರ ಮಕ್ಕಳಿಗೆ ಗುಡ್ ನ್ಯೂಸ್: ವಿದ್ಯಾರ್ಥಿ ವೇತನ ಮಂಜೂರು ಮಾಡಲು ಪ್ರತಿಭಾವಂತರಿಂದ ಅರ್ಜಿ ಆಹ್ವಾನ

ಬೆಂಗಳೂರು: 2024-25ನೇ ಸಾಲಿಗಾಗಿ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2024-26ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಎಸ್ಎಸ್ಎಲ್ಸಿಯಿಂದ ಸ್ನಾತಕೋತ್ತರವರೆಗೆ ಅತಿ ಹೆಚ್ಚು ಪಡೆದ ಶಿಕ್ಷಕರುಗಳ/ಉಪನ್ಯಾಸಕರು/ಪ್ರಾಂಶುಪಾಲರು/ ನಿವೃತ್ತ ಶಿಕ್ಷಕರು/ ನಿವೃತ್ತ ಉಪನ್ಯಾಸಕರು/ಪ್ರಾಂಶುಪಾಲರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವ ಸಲುವಾಗಿ ONLINE ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. ನಿಧಿಗಳ ಕಛೇರಿಯಿಂದ ಈಗಾಗಲೇ ಆನ್‌ಲೈನ್‌ನಲ್ಲಿ ಆಜೀವ ಸದಸ್ಯತ್ವದ ಹೊಸ ನೋಂದಣಿ ಸಂಖ್ಯೆ ಪಡೆದ ಶಿಕ್ಷಕರು/ ಉಪನ್ಯಾಸಕರು/ಪ್ರಾಂಶುಪಾಲರು/ ನಿವೃತ್ತಿ ಹೊಂದಿರುವ ಶಿಕ್ಷಕರು/ಉಪನ್ಯಾಸಕರು/ಪ್ರಾಂಶುಪಾಲರು ಮಾತ್ರ ತಮ್ಮ ಮಗುವಿನ ವಿವರಗಳನ್ನು ಸಂಬಂಧಿಸಿದ ONLINE PORTAL ನಲ್ಲಿ ಗಣಕೀಕರಿಸುವಂತೆ ಈ ಮೂಲಕ ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024-25ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ದ್ವಿತೀಯ ಪಿ.ಯು.ಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.(CBSE / ICSEವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ)

2024-25ನೇ ಶೈಕ್ಷಣಿಕ ಸಾಲಿನ ಪದವಿ ಅಂತಿಮ ವರ್ಷದ ಬಿ.ಎ/ ಬಿ.ಎಸ್ಸಿ/ ಬಿ.ಕಾಂ/ಬಿ.ಇಡಿ/ ಬಿ.ಸಿ.ಎ.(BA/BSC/ B.COM/ B.ED/ BCA/ BBM/BSC.Ag/ BHM/ LLB)ಪರೀಕ್ಷೆಯಲ್ಲಿಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಅಂದರೆ 2ನೇ ಸೆಮಿಸ್ಟರ್ ಉತ್ತೀರ್ಣರಾಗಿ 3ನೇ ಸೆಮಿಸ್ಟರ್ (MA, Msc, M.com, Med, MSCAg, MLIB) ವಿದ್ಯಾರ್ಥಿಗಳು ONLINE ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

2024-25ನೇ ಶೈಕ್ಷಣಿಕ ಸಾಲಿನಲ್ಲಿ BE 6ನೇ ಸೆಮಿಸ್ಟರ್ ಉತ್ತೀರ್ಣರಾದವರು ಹಾಗೂ ಪ್ರಸ್ತುತ BE 7ನೇ ಸೆಮಿಸ್ಟರ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ MBBS 2ನೇ ಫೇಸ್ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಹಾಗೂ 3ನೇ ಫೇಸ್‌ನಲ್ಲಿ (MBBS/ BDS/BHMS/ BAMS/ BUMS)ಓದುತ್ತಿರುವವರು ONLINE ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಶೇಕಡ 60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಿದ ಅಂಕ ಪಟ್ಟಿಯೊಂದಿಗೆ ONLINE ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.ONLINE ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು.ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ kstbfonline.karnataka.gov.in URLಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ www.schooleducation.kar.nic.ind TBF SWF ONLINE SERVICES ಮೂಲಕ ಈಗಾಗಲೆ ಆಜೀವ ಸದಸ್ಯತ್ವದ ಹೊಸ ಕಾರ್ಡ್ ಸಂಖ್ಯೆ ಪಡೆದವರು ಮಾತ್ರ ಪ್ರತಿಭಾವಂತ ವಿದ್ಯಾರ್ಥಿ ವೇತನದಧನಸಹಾಯದ ಅರ್ಜಿಯನ್ನು ONLINE ಮೂಲಕ ಸಲ್ಲಿಸಬಹುದಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ ONLINE ಮೂಲಕ ಅರ್ಜಿಗಳನ್ನು ಸಲ್ಲಿಸುವ ದಿನಾಂಕ: 01-01-2026

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ ONLINE ಮೂಲಕ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 15-01-2026

ಅಂತಿಮ ದಿನಾಂಕದ ನಂತರ ONLINE ನಲ್ಲಿ ಸಲ್ಲಿಸುವ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular