ಮೈಸೂರು : ಬೈಕ್ ಸಮೇತ ಯುವಕನೋರ್ವ ಸಜೀವವಾಗಿ ದಹನಗೊಂಡಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಂಜನಗೂಡಿನ ಕೊರೆಹುಂಡಿ ಗ್ರಾಮದ ಹುಲ್ಲಹಳ್ಳಿ ನಾಲೆಬಳಿ ಈ ಘಟನೆ ನಡೆದಿದೆ.
ಮೃತ ಯುವಕನನ್ನು ರಾಂಪುರ ಗ್ರಾಮದ ಆದಿತ್ಯ (24) ಎಂದು ಗುರುತಿಸಲಾಗಿದೆ.ನಂಜನಗೂಡಿನಿಂದ ಕೊರೆಹುಂಡಿಗೆ ತೆರಳುವ ಮಾರ್ಗದಲ್ಲಿ ಹುಲ್ಲಹಳ್ಳಿ ನಾಲೆ ಪಕ್ಕದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಯುವಕ ಬೈಕ್ ಸಮೇತ ಯುವಕನ ದೇಹ ಸುಟ್ಟು ಕರಕಲಾಗಿದೆ. ಘಟನೆ ಸಾಕಷ್ಟು ಅನುಮಾನ ಮೂಡಿಸಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

