ಬೆಂಗಳೂರು: ಮಾಲ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಲಾಗಿದೆ. ಡಿಸೆಂಬರ್ 25 ರಂದು ಸ್ನೇಹಿತರೊಂದಿಗೆ ಮಾಲ್ ನಲ್ಲಿ ಯುವತಿ ಕ್ರಿಸ್ಮಸ್ ಸಂಭ್ರಮಾಚರಿಸುತ್ತಿದ್ದ ವೇಳೆಯಲ್ಲಿ ಘಟನೆ ನಡೆದಿದೆ.
ಯುವತಿ ಖಾಸಗಿ ಅಂಗವನ್ನು ಸ್ಪರ್ಶಿಸಿ ಆರೋಪಿ ವಿಕೃತಿ ಮೆರೆದಿದ್ದಾನೆ. ಸ್ಥಳದಲ್ಲಿದ್ದ ಮಹದೇವಪುರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಶೀಲನೆ ನಡೆಸಿ ಗುವಾಹಟಿ ಮೂಲದ ಮನೋಜ್(27) ಎಂಬುವನನ್ನು ಬಂಧಿಸಲಾಗಿದೆ. ಡೆಲಿವರಿ ಬಾಯ್ ಆಗಿ ಆರೋಪಿ ಮನೋಜ್ ಕೆಲಸ ಮಾಡುತ್ತಿದ್ದಾನೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

