HomeLatest NewsBIG NEWS: ಕಾರವಾರ ನೌಕಾನೆಲೆಯಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಬ್ ಮರೀನ್ ಯಾನ: ಜಲಾಂತರ್ಗಾಮಿ...

BIG NEWS: ಕಾರವಾರ ನೌಕಾನೆಲೆಯಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಬ್ ಮರೀನ್ ಯಾನ: ಜಲಾಂತರ್ಗಾಮಿ ನೌಕೆಯಲ್ಲಿ ಸಾಗಲಿರುವ ಮೊದಲ ಮಹಿಳಾ ರಾಷ್ಟ್ರಪತಿ

ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರದ ನೌಕಾನೆಲೆಯಲ್ಲಿ ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರ ಯಾನ ಕೈಗೊಳ್ಳಲಿದ್ದಾರೆ.

ಶನಿವಾರ ಗೋವಾದಲ್ಲಿ ವಾಸ್ತವ ಹೂಡಿರುವ ರಾಷ್ಟ್ರಪತಿಗಳು ಭಾನುವಾರ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ವಿಕ್ರಾಂತ್ ಯುದ್ಧ ನೌಕೆ ವೀಕ್ಷಿಸಿ ನಂತರ ಜಲಾಂತರ್ಗಾಮಿ ನೌಕೆಯ ಮೂಲಕ ಸಮುದ್ರ ಯಾನ ಕೈಗೊಳ್ಳಲಿದ್ದಾರೆ.

ಈ ಮೂಲಕ ದ್ರೌಪದಿ ಮುರ್ಮು ಅವರು ಜಲಾಂತರ್ಗಾಮಿಯಲ್ಲಿ ಸಾಗಲಿರುವ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಡಾ. ಅಬ್ದುಲ್ ಕಲಾಂ ಅವರು ಜಲಾಂತರ್ಗಾಮಿ ನೌಕೆಯಲ್ಲಿ ಯಾನ ಕೈಗೊಂಡ ಮೊದಲ ರಾಷ್ಟ್ರಪತಿಯಾಗಿದ್ದಾರೆ. ಅವರು 2006ರಲ್ಲಿ ಬಂಗಾಳಕೊಲ್ಲಿಯಲ್ಲಿ ಐಎನ್ಎಸ್ ಸಿಂಧು ರಕ್ಷಕ್ ಸಬ್ ಮರೀನ್ ನಲ್ಲಿ 3.5 ಗಂಟೆ ಯಾನ ಮಾಡಿದ್ದರು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರವಾರ ನೌಕಾನೆಲೆಯಲ್ಲಿ ಜಲಾಂತರ್ಗಾಮಿ ನೌಕೆಯ ಮೂಲಕ ಸಮುದ್ರಯಾನ ಕೈಗೊಳ್ಳಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಷ್ಟ್ರಪತಿಗಳು ಆಗಮಿಸಿ ನಿರ್ಗಮಿಸುವವರಿಗೆ ಸುರಕ್ಷತೆಯ ಕಾರಣಗಳಿಂದ ಭಾನುವಾರ ಮಧ್ಯಾಹ್ನ 3.30ರವರೆಗೆ ಸಮುದ್ರ ತೀರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.

ಡಿ. 28ರಂದು ಕಾರವಾರ ನೌಕಾನೆಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 3:30ರವರೆಗೆ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular