HomeLatest Newsರಾಜ್ಯದ ಹಿಂದುಳಿದ ವರ್ಗದ ಸಮುದಾಯಕ್ಕೆ ಗುಡ್ ನ್ಯೂಸ್  : 'ದೇವರಾಜ ಅರಸು ಅಭಿವೃದ್ದಿ' ನಿಗಮದಿಂದ ಸಿಗಲಿದೆ...

ರಾಜ್ಯದ ಹಿಂದುಳಿದ ವರ್ಗದ ಸಮುದಾಯಕ್ಕೆ ಗುಡ್ ನ್ಯೂಸ್  : ‘ದೇವರಾಜ ಅರಸು ಅಭಿವೃದ್ದಿ’ ನಿಗಮದಿಂದ ಸಿಗಲಿದೆ ಈ ಸೌಲಭ್ಯಗಳು

ಬೆಂಗಳೂರು : ಹಿಂದುಳಿದ ವರ್ಗಗಳ ಜನರ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ರೂ.2.00 ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಒದಗಿಸುವ ಯೋಜನೆಯ ಮಾರ್ಗಸೂಚಿಗಳನ್ನ ಸರ್ಕಾರ ಹೊರಡಿಸಿದೆ.

ಹಿಂದುಳಿದ ವರ್ಗಗಳಿಗೆ ಸೇರಿದ ಜನರು ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸಾಲದ ನೆರವು ನೀಡಲಾಗುವುದು.

ಅರ್ಹತೆಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಅಭ್ಯರ್ಥಿಯು ಸರ್ಕಾರದ ಆದೇಶ ಸಂಖ್ಯೆ:
    ಸಕಇ 225 ಬಿಸಿಎ 2000, ದಿನಾಂಕ:30.03.2002ರಲ್ಲಿ ಗುರುತಿಸಿದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳನ್ನು ಮೀರಿರಬಾರದು.
  2. ಕರ್ನಾಟಕ ರಾಜ್ಯ ಖಾಯಂ ನಿವಾಸಿಯಾಗಿರಬೇಕು.
  3. ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ 55 ವರ್ಷಗಳ ಮಿತಿಯೊಳಗಿರಬೇಕು.
  4. ಈ ಹಿಂದೆ ಈಗಾಗಲೇ ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆದಿರಬಾರದು.
  5. ಮಹಿಳೆಯರಿಗೆ ಈ ಯೋಜನೆಯಲ್ಲಿ ಶೇ.33ರಷ್ಟು ಮೀಸಲು ನಿಗಧಿಪಡಿಸಿದೆ.
  6. ಅಂಗವಿಕಲರಿಗೆ ಈ ಯೋಜನೆಯಲ್ಲಿ ಶೇ.5 ರಷ್ಟು ಮೀಸಲು ನಿಗಧಿಪಡಿಸಿದೆ.
  7. ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು.
    ಘಟಕ ವೆಚ್ಚ / ಸಾಲದ ಮೊತ್ತ:
    ಹಿಂದುಳಿದ ವರ್ಗಗಳಿಗೆ ಸೇರಿವ ಜನರು ಕೈಗೊಳ್ಳುವ ಸ್ವಯಂ ಉದ್ಯೋಗ/ಆರ್ಥಿಕ ಚಟುವಟಿಕೆಗಳ ಅನುಸಾರ ಕನಿಷ್ಠ ರೂ.1.00 ಲಕ್ಷ ಗರಿಷ್ಠ ರೂ.2.00 ಲಕ್ಷಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡುವುದು, ರೂ.1.00 ಲಕ್ಷಗಳ ಮೊತ್ತದಲ್ಲಿ ಶೇ.20 ರಷ್ಟು ರೂ.20,000/-ಗಳ ಸಹಾಯಧನ ಹಾಗೂ ರೂ.1.00 ಲಕ್ಷದಿಂದ 2.00 ಲಕ್ಷಗಳ ಸಾಲದ ಮೊತ್ತದಲ್ಲಿ ಶೇ.15ರಷ್ಟು ಗರಿಷ್ಠ ರೂ.30,000/-ಗಳ ಸಹಾಯಧನ ಒಳಗೊಂಡಿರುತ್ತದೆ.
  8. ಅರಿವು ಶೈಕ್ಷಣಿಕ ಸಾಲ ಯೋಜನೆ:

ಅಭ್ಯರ್ಥಿಗಳ ಆಯ್ಕೆ: ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಇತರೆ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡುವುದು.

ಅರಿವು ನವೀಕರಣ: ಈಗಾಗಲೇ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಕಳೆದ ಸಾಲುಗಳಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದ ವಿದ್ಯಾರ್ಥಿಗಳಿಗೆ ಸದರಿ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಮುಂದುವರೆದ ಕಂತುಗಳಿಗೆ (3.4,5ನೇ ಕಂತುಗಳು) ವಾರ್ಷಿಕ ಗರಿಷ್ಠ ರೂ.1.00ಲಕ್ಷಗಳ ವರೆಗೆ ಸಾಲವನ್ನು ಶೇ.2 ರ ಬಡ್ಡಿ ದರದಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಅಭ್ಯರ್ಥಿಯ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಂದ (Study Certificate) ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕ ಪಟ್ಟಿ ಪೋಷಕರ ಒಪ್ಪಿಗೆ ಪತ್ರ, ಶುಲ್ಕ ಪಾವತಿ ರಸೀದಿ, ಜಾಮೀನುದಾರರ ಒಪ್ಪಿಗೆ ಪತ್ರವನ್ನು ಅಭ್ಯರ್ಥಿಯು ಮನವಿ ಪತ್ರದೊಂದಿಗೆ ಸಲ್ಲಿಸಿದ್ದಲ್ಲಿ ಮಂಜೂರಾದ ಸಾಲವನ್ನು ಬಿಡುಗಡೆ ಮಾಡಲಾಗುವುದು.

  1. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು:
    ಉದ್ದೇಶ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ
    ఇంజినియరింగ్ & టెశ్నాలజీ..
  • ಮ್ಯಾನೇಜ್ಮೆಂಟ್ & ಕಾಮರ್ಸ್
    ಸೈನ್ಸ್ & ಟೆಕ್ನಾಲಜಿ. ಹೀಗೆ ಒಟ್ಟು 3 ವ್ಯಾಸಂಗದ ಕೋರ್ಸ್ನ ಕ್ಷೇತ್ರಗಳಿಗೆ (Category) ಸೌಲಭ್ಯ ವಿಸ್ತರಿಸಲಾಗಿದೆ.
    ಸದರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಮೇಲ್ಕಂಡ ಕೋರ್ಸ್ ಗಳ ವ್ಯಾಸಂಗಕ್ಕೆ ಪ್ರವೇಶ ಹೊಂದಿದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿಗೆ ಸೇರಿದವರಾಗಿರಬೇಕು.

ಸಾಲದ ಮೊತ್ತ: ವಾರ್ಷಿಕ ಗರಿಷ್ಠ ರೂ.25.00ಲಕ್ಷಗಳಂತೆ 2 ವರ್ಷಗಳ ಅವಧಿಗೆ ಗರಿಷ್ಠ ರೂ.50.00ಲಕ್ಷಗಳು.
ಅಭ್ಯರ್ಥಿಯ ವಯಸ್ಸು ಮಾಸ್ಟರ್ ಡಿಗ್ರಿ ವ್ಯಾಸಂಗಕ್ಕೆ – 32 ವರ್ಷ ಹಾಗೂ ಪಿ.ಹೆಚ್.ಡಿ. ವ್ಯಾಸಂಗಕ್ಕೆ -35 ವರ್ಷಗಳ ವಯೋಮಿತಿಯನ್ನು ನಿಗಧಿಪಡಿಸಲಾಗಿರುತ್ತದೆ.
ಕುಟುಂಬದ ವಾರ್ಷಿಕ ಆದಾಯ ರೂ.15,00,000/-ಗಳ ಮಿತಿಯಲ್ಲಿರಬೇಕು.
QS World University Ranking 1000 2៨ ថ
ಅರ್ಹತ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಕಡಿಮೆ ಅಂಕ ಇರಬಾರದು.
ವ್ಯಾಸಂಗಕ್ಕೆ ಪ್ರವೇಶ ಪಡೆದ ಬಗ್ಗೆ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶ ಪತ್ರ ವೀಸಾ, ಪಾಸ್ಪೋರ್ಟ್, ಎರ್ಟಿಕೇಟ್ನ ಪ್ರತಿ ಒದಗಿಸಬೇಕು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular