HomeLatest Newsಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್ ಈಗ ರಷ್ಯಾದಲ್ಲಿ ರಸ್ತೆ ಗುಡಿಸುವ ಕೆಲಸಗಾರ!

ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್ ಈಗ ರಷ್ಯಾದಲ್ಲಿ ರಸ್ತೆ ಗುಡಿಸುವ ಕೆಲಸಗಾರ!

ರಷ್ಯಾದಲ್ಲಿ ಸದ್ಯ ಕಾರ್ಮಿಕರ ತೀವ್ರ ಕೊರತೆ ಎದುರಾಗಿದ್ದು, ಇದನ್ನು ನೀಗಿಸಲು ಭಾರತದಿಂದ ಹೋದ ವಲಸಿಗರು ಅಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇವರಲ್ಲಿ ಒಬ್ಬರಾದ 26 ವರ್ಷದ ಮುಕೇಶ್ ಮಂಡಲ್ ಎಂಬುವವರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈತ ಭಾರತದಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ತಿಂಗಳಿಗೆ 1.1 ಲಕ್ಷ ರೂಪಾಯಿ ಸಂಬಳ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸಲು ‘ಕೊಲೊಮ್ಯಾಜ್‌ಸ್ಕೊಯ್’ ಎಂಬ ರಸ್ತೆ ನಿರ್ವಹಣಾ ಕಂಪನಿಯು ಭಾರತದಿಂದ 17 ಮಂದಿಯನ್ನು ಕರೆಸಿಕೊಂಡಿದೆ. ಈ ಗುಂಪಿನಲ್ಲಿ ಮುಕೇಶ್ ಮಂಡಲ್ ಕೂಡ ಒಬ್ಬರು. ಈ ಕೆಲಸಕ್ಕಾಗಿ ಅವರಿಗೆ ತಿಂಗಳಿಗೆ ಸುಮಾರು 1 ಲಕ್ಷ ರೂಬಲ್ಸ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 1.1 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತಿದೆ. ಇದರೊಂದಿಗೆ ವಸತಿ, ಆಹಾರ ಮತ್ತು ಸಾರಿಗೆ ಸೌಲಭ್ಯವನ್ನೂ ಕಂಪನಿಯೇ ಒದಗಿಸುತ್ತಿದೆ.

ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡಿದ ಅನುಭವ! ರಷ್ಯಾದ ಮಾಧ್ಯಮವೊಂದರ ಜೊತೆ ಮಾತನಾಡಿದ ಮುಕೇಶ್, “ನಾನು ಈ ಹಿಂದೆ ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಎಐ (AI), ಚಾಟ್‌ಬಾಟ್ ಮತ್ತು ಜಿಪಿಟಿಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದೆ” ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ನೇರವಾಗಿ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡಿದ್ದಾರೋ ಅಥವಾ ಆ ತಂತ್ರಜ್ಞಾನ ಬಳಸುವ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲಸ ಯಾವುದಾದರೇನು? ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ರಸ್ತೆ ಗುಡಿಸುವ ಕೆಲಸ ಮಾಡುತ್ತಿರುವುದಕ್ಕೆ ಮುಕೇಶ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. “ನಾನು ಭಾರತೀಯ, ನಮಗೆ ಕೆಲಸ ಮುಖ್ಯವೇ ಹೊರತು ಅದು ಯಾವ ಕೆಲಸ ಎಂಬುದು ಮುಖ್ಯವಲ್ಲ. ಕೆಲಸವೇ ದೇವರು ಎಂದು ನಂಬಿದವನು ನಾನು. ಶೌಚಾಲಯ ಇರಲಿ ಅಥವಾ ರಸ್ತೆ ಇರಲಿ, ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದು ನಮ್ಮ ಧರ್ಮ” ಎಂದು ಅವರು ಹೇಳಿದ್ದಾರೆ.

ಆರ್ಥಿಕ ಸುಧಾರಣೆಗಾಗಿ ಈ ನಿರ್ಧಾರ ಭಾರತದಿಂದ ಹೋಗಿರುವ ಈ ತಂಡದಲ್ಲಿ ಕೇವಲ ಎಂಜಿನಿಯರ್‌ಗಳು ಮಾತ್ರವಲ್ಲದೆ, ರೈತರು, ಚಾಲಕರು, ಆರ್ಕಿಟೆಕ್ಟ್‌ಗಳು ಮತ್ತು ಉದ್ಯಮಿಗಳೂ ಇದ್ದಾರೆ. ಪ್ರತಿಯೊಬ್ಬರೂ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ರಷ್ಯಾಕ್ಕೆ ಬಂದಿದ್ದಾರೆ. ಒಂದು ವರ್ಷದವರೆಗೆ ಇಲ್ಲಿ ಕೆಲಸ ಮಾಡಿ, ಹಣ ಉಳಿಸಿದ ನಂತರ ಮತ್ತೆ ಭಾರತಕ್ಕೆ ಮರಳುವ ಯೋಜನೆ ಇವರದ್ದಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular