HomeLatest Newsಆನ್ ಲೈನ್ ನಲ್ಲಿ ಸ್ನೇಹ ಬೆಳೆಸುವವರೇ ಹುಷಾರ್: ಕೆಲಸದ ಆಮಿಷವೊಡ್ಡಿ ಯುವತಿಯರಿಗೆ ಕಿರುಕುಳ: ವ್ಯಕ್ತಿಯ ಟಾರ್ಚರ್...

ಆನ್ ಲೈನ್ ನಲ್ಲಿ ಸ್ನೇಹ ಬೆಳೆಸುವವರೇ ಹುಷಾರ್: ಕೆಲಸದ ಆಮಿಷವೊಡ್ಡಿ ಯುವತಿಯರಿಗೆ ಕಿರುಕುಳ: ವ್ಯಕ್ತಿಯ ಟಾರ್ಚರ್ ಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಬೆಂಗಳೂರು: ಆನ್ ಲೈನ್ ನಲ್ಲಿ ಪರಿಚಯ ಮಾಡಿಕೊಂಡು, ಸ್ನೇಹ ಬೆಳೆಸುವ ಮುನ್ನ ಎಚ್ಚರವಿರಲಿ. ಕೆಲಸದ ಆಮಿಷಗಳನ್ನುವೊಡ್ಡಿ ಮಹಿಳೆಯರು, ಯುವತಿಯರ ಸ್ನೇಹ ಸಂಪಾದಿಸಿ ಬಳಿಕ ಬ್ಲ್ಯಾಕ್ ಮೇಲ್ ಮಾಡಿ ಬದುಕನ್ನೇ ಹಾಳು ಮಾಡುವ ದುರುಳರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಇಂತದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಲಸದ ಆಮಿಷವೊಡ್ಡಿ ಆನ್ ಲೈನ್ ನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮಹಿಳೆಯರಿಗೆ ಟಾರ್ಚರ್ ನೀಡುತ್ತಿದ್ದು, ಇದರಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾರಿತೋಷ್ ಯಾದವ್ ಎಂಬಾತ ಆನ್ ಲೈನ್ ನಲ್ಲಿ ಕೆಲಸ ಕೊಡಿಸುವುದಾಗಿ ಯುವತಿಯರು, ಮಹಿಳೆಯರನ್ನು ಪರಿಚಯಿಸಿಕೊಂಡು ಆರಂಭದಲ್ಲಿ ಹಣವನ್ನು ಕೊಟ್ಟು ಬಳಿಕ ಮಹಿಳೆಯರಿಗೆ ಪ್ರತಿದಿನ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸಿ ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ನಿತ್ಯವೂ ಮೆಸೇಜ್ ಕಳುಹಿಸಿ ಕಿರುಕುಳ ನೀಡುವುದು, ಅಶ್ಲೀಲವಾಗಿ ಸಂದೇಶ ರವಾನಿಸುವುದು ಮಾಡುತ್ತಿದ್ದ. ಇದರಿಂದ ನೊಂದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕೆಲಸ ಹುಡುಕುವ ಮಹಿಳೆಯರೇ ಪಾರಿತೋಷ್ ಯಾದವ್ ಟಾರ್ಗೆಟ್ ಆಗಿದ್ದು, ಇದೇ ರೀತಿ ಹಲವು ಮಹಿಳೆಯರಿಗೆ ಟಾರ್ಚರ್ ಕೊಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರಿಗೆ ದೂರು ನೀಡಿದರೂ ಈವರೆಗೆ ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular