ತುಮಕೂರು : ಗದಗ, ಮಂಗಳೂರು ಬೆನ್ನಲ್ಲೇ ತುಮಕೂರು ಡಿಸಿ ಕಚೇರಿ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಇಂದು ಬೆಳಗ್ಗೆ 7 ಗಂಟೆಗೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರ ಅಧಿಕೃತ ಇಮೇಲ್ ಐಡಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಡಿಸಿ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದು ಸ್ಪೋಟಗೊಳ್ಳಲಿದೆ ಎಂಬ ಸಂದೇಶ ಬಂದಿದೆ. ವಿಷಯ ತಿಳಿದ ಪೊಲೀಸರು ಕೂಡಲೇ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನ ಆರ್ ಟಿ ಒ ಕಚೇರಿ, ಗದಗ ಜಿಲ್ಲಾಡಳಿತ ಭವನ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ
ಮಂಗಳೂರಿನ ಆರ್ ಟಿ ಒ ಕಚೇರಿಗೆ, ಗದಗ ಜಿಲ್ಲಾಡಳಿತ ಭವನ ಸ್ಪೋಟಿಸುವುದಾಗಿ ನಿನ್ನೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕ ಸೃಷ್ಟಿಯಾಗಿತ್ತು.ಮಂಗಳೂರಿನ ಆರ್ ಟಿ ಒ ಕಚೇರಿ ಸ್ಪೋಟಿಸುವುದಾಗಿ ಹಾಗೂ ಗದಗ ಜಿಲ್ಲಾಡಳಿತ ಭವನದಲ್ಲಿ ಬಾಂಬ್ ಸ್ಪೋಟಿಸುವುದಾಗಿ ಇಮೇಲ್ ಬಂದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ಸ್ಪೋಟಕಗಳು ಪತ್ತೆಯಾಗಿರಲಿಲ್ಲ.
5 ಬಾಂಬ್ ಗಳಿಂದ ಜಿಲ್ಲಾಡಳಿತ ಭವನ ಸ್ಪೋಟಿಸುವಿದಾಗಿ ಸಂದೇಶ ಬಂದಿದ್ದು, ಸಿಬ್ಬಂದಿಗಳು ಕಂಗಾಲಾಗಿದ್ದರು. ಅರ್ನಾ ಅಶ್ವಿನ್ ಶೇಖರ್ ಎಂಬ ಇ-ಮೇಲ್ ಐಡಿಯಿಂದ ಡಿಸಿ ಕಚೇರಿ ಇಮೇಲ್-ಗೆ ಬೆದರಿಕೆ ಬಂದಿತ್ತು. ಅದೇ ರೀತಿ ಮಂಗಳೂರಿನ ‘RTO’ ಕಚೇರಿ ಸ್ಪೋಟಿಸುವುದಾಗಿ ಕೂಡ ಬೆದರಿಕೆ (Email) ಮೇಲ್ ಬಂದಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು.

