ಬಳ್ಳಾರಿ: ಬೈಕ್ ಗಳನ್ನು ಸಾಗಿಸುತ್ತಿದ್ದ ಚಲಿಸುತ್ತಿದ್ದ ಲಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಲಾರಿಯಲ್ಲಿದ್ದ 40 ಯಮಹ ಬೈಕ್ ಗಳು ಸುಟ್ಟು ಕರಕಲಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಅನಂತಪುರ ರಸ್ತೆಯ ಆಟೋ ನಗರಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಲಾರಿಯಲ್ಲಿದ್ದ ೪೫ ಲಕ್ಷ ಮೌಲ್ಯದ 40 ಯಮಹ ಬೈಕ್ ಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಚಾಲಕ ಲಾರಿಯಿಂದ ಕೆಳಗಿಳಿದು ಪ್ರಾಣ ರಕ್ಷಿಸಿಕೊಂಡಿದ್ದಾನೆ.
ಚೆನ್ನೈನಿಂದ ಬೈಕ್ ಗಳನ್ನು ಹೊತ್ತು ಲಾರಿ ಬಳ್ಳಾರಿಗೆ ಬಂದಿತ್ತು. ಆದರೆ ಶೋರೂಂ ಗೆ ತಲುಪುವ ಮೊದಲೇ ಲಾರಿ ಸಮೇತ ಬೈಕ್ ಗಳು ಬೆಂಕಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ.
ಘಟನೆ ಸಂಬಂಧ ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

