ಬೆಳಗಾವಿ: ಅತಿಥಿ ಉಪನ್ಯಾಸಕರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ. ಬೆಳಗಾವಿಯ ಸುವರ್ಣಸೌಧದ ಸುವರ್ಣ ಗಾರ್ಡನ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಡಿಸಿ ಜೊತೆಗಿನ ಸಭೆಯ ನಂತರ ಅತಿಥಿ ಉಪನ್ಯಾಸಕರು ಕೈಬಿಟ್ಟಿದ್ದಾರೆ.
ಸಂಗದ ಮುಖಂಡರ ಜೊತೆಗೆ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಸಭೆ ನಡೆಸಿದ್ದಾರೆ. ಡಿಸಿ ಜೊತೆಗೆ ಚರ್ಚೆಯ ವೇಳೆ ನಮ್ಮ ಹೋರಾಟಕ್ಕೆ ಸ್ಪಂದನೆ ನೀಡಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ನಾಳೆ ಸಭೆಗೆ ಬರುವಂತೆ ಡಿಸಿ ಕರೆದಿದ್ದಾರೆ. ಸಂಘದ ಆಯ್ದ ಐವರು ಮುಖಂಡರು ಮಾತುಕತೆಗೆ ಹೋಗಬೇಕಿದೆ. ಸೋಮವಾರ ಸರ್ಕಾರದ ಮಟ್ಟದಲ್ಲಿ ನಮ್ಮ ವಿಚಾರ ಚರ್ಚೆಯಾಗಲಿದೆ. ಸಿಎಂ, ಸಂಬಂಧಿಸಿದ ಸಚಿವರು ನ್ಯಾಯ ಕೊಡಿಸುವ ಭರವಸೆ ಇದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲಮನೆ ಹೇಳಿದ್ದಾರೆ.
