ಬೆಂಗಳೂರು : ನಾಳೆ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆ ಡಿ ಬಾಸ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಸಿನಿಮಾ ಬ್ಲಾಕ್ ಬಸ್ಟರ್ ಆಗಲಿ ಎಂದು ನಟ ದರ್ಶನ್ ಗೆ ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ.
ಟ್ವೀಟ್ ಮಾಡಿರುವ ನಟ ರಿಷಬ್ ಶೆಟ್ಟಿ’ ದರ್ಶನ್ ಸರ್ ಮತ್ತು ಇಡೀ ತಂಡಕ್ಕೆ ಡೆವಿಲ್ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಸಿನಿಮಾ ಬ್ಲಾಕ್ ಬಸ್ಟರ್ ಆಗಲಿ ಎಂದು ಹಾರೈಸುತ್ತೇನೆ ! ಎಂದು ಟ್ವೀಟ್ ಮಾಡಿದ್ದಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ನಾಳೆ ಬಿಡುಗಡೆಯಾಗಲಿದೆ. ನಾಳೆ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಶುರುವಾಗಲಿದ್ದು, ಇದರ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.
ದರ್ಶನ್ ಸಿನಿಮಾ ಗೆಲ್ಲಿಸಲೇಬೇಕೆಂದುಕೊಂಡಿರುವ ಅಭಿಮಾನಿಗಳಿಂದ ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಆಗಿದೆ. ಶೋಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಗುರುವಾರ ಬೆಳಿಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಲಿದೆ. ಚಿತ್ರದ ಕುರಿತಾಗಿ ನಿರೀಕ್ಷೆ ಭಾರೀ ಹೆಚ್ಚಿದೆ. ತೆರೆ ಮೇಲೆ ದರ್ಶನ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಲ್ಲಿದ್ದಾರೆ.
Wishing @dasadarshan Sir and the entire team of Devil a blockbuster release! May the film set the screens on fire.#Devil #PrakashVeer @AJANEESHB pic.twitter.com/LH1y7SxaRC
— Rishab Shetty (@shetty_rishab) December 10, 2025
