ಬೆಂಗಳೂರು: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್(ಕೆ.ಎಸ್.ಸಿ.ಎ.) ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.
ಕೆ.ಎಸ್.ಸಿ.ಎ. ಅಧ್ಯಕ್ಷ, ಉಪಾಧ್ಯಕ್ಷ ಸೇರಿ 16 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು. ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ವೆಂಕಟೇಶ್ ಪ್ರಸಾದ್ ಅವರಿಗೆ 749 ಮತಗಳು, ಅವರ ಪ್ರತಿಸ್ಪರ್ಧಿ ಶಾಂತಕುಮಾರ್ ಗೆ 558 ಮತಗಳು ಬಂದಿವೆ.
191 ಮತಗಳ ಅಂತರದಿಂದ ಕೆ.ಎಸ್.ಸಿ.ಎ. ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.
ಕೆ.ಎಸ್.ಸಿ.ಎ. ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಬಣ ಭರ್ಜರಿ ಜಯಗಳಿಸಿದೆ.
ಉಪಾಧ್ಯಕ್ಷರಾಗಿ ಸುಜಿತ್ ಸೋಮಸುಂದರಂ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಮಧುಕರ್ ಆಯ್ಕೆಯಾಗಿದ್ದಾರೆ.
TAGGED:ವೆಂಕಟೇಶ್ ಪ್ರಸಾದ್
