HomeLatest NewsBREAKING: ಗೋವಾದಲ್ಲಿ ಬೆಂಕಿ ದುರಂತ ಘಟನೆಯಲ್ಲಿ 25 ಜನರು ಸಜೀವದಹನ: ನೈಟ್ ಕ್ಲಬ್ ಮಾಲೀಕ, ಮ್ಯಾನೇಜರ್...

BREAKING: ಗೋವಾದಲ್ಲಿ ಬೆಂಕಿ ದುರಂತ ಘಟನೆಯಲ್ಲಿ 25 ಜನರು ಸಜೀವದಹನ: ನೈಟ್ ಕ್ಲಬ್ ಮಾಲೀಕ, ಮ್ಯಾನೇಜರ್ ಅರೆಸ್ಟ್

ಪಣಜಿ: ಉತ್ತರ ಗೋವಾದ ನೈಟ್ ಕ್ಲಬ್ ವೊಂದರಲ್ಲಿ ಬೆಂಕಿ ದುರಂತ ಸಂಭವಿಸಿ 25 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ನೈಟ್ ಕ್ಲಬ್ ಮಾಲೀಕ ಹಾಗೂ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ.

ಗೋವಾದ ಅರ್ಪೋರಾದ ರೋಮಿಯೋ ಲೇನ್ ಕ್ಲಬ್ ಮಾಲೀಕ ಹಾಗೂ ಮ್ಯಾನೇಜರ್ ನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಅರ್ಪೋರಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಅರ್ಪೋರಾ ಪ್ರದೇಶದ ನೈಟ್ ಕ್ಲಬ್ ನಲ್ಲಿ ತಡರಾತ್ರಿ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ದುರಂತದಲ್ಲಿ 14 ಜನ ಸಿಬ್ಬಂದಿ , ನಾಲ್ವರು ಪ್ರವಾಸಿಗರು ಸೇರಿದಂತೆ ಒಟ್ಟು 25 ಜನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular