ಆನೇಕಲ್: ರೆಡಿಯಾಲಜಿಸ್ಟ್ ಇಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗೊದ್ದ ಮಹಿಳೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದರೆ ಆಕೆಯ ವಿರುದ್ಧವೇ ಪೊಲೀಸರು ಎಫ್ ಐ ಆರ್ ದಾಖಲಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.
ರೆಡಿಯಾಲಜಿಸ್ಟ್ ಜಯಕುಮಾರ್ ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಸಂತ್ರಸ್ತೆ ದೂರು ನೀಡಲು ಆನೇಕಲ್ ಠಾಣೆಗೆ ಬಂದಿದ್ದ ವೇಳೆ ಆಕೆಯ ವಿರುದ್ಧವೇ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಹಣದಾಸೆಗೆ ಪೊಲೀಸರು ಶಾಮೀಲಾಗಿ ದೂರು ನೀಡಲು ಬಂದ ತನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಕೊಡಿಸಿ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ಆನೇಕಲ್ ಪೊಲೀಸ್ ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ವಿರುದ್ಧ ಮಹಿಳೆ ದೂರಿದ್ದಾರೆ. ಸ್ಕ್ಯಾನಿಂಗ್ ಸೆಂಟರ್ ನಲ್ಲಿ ರೆಡಿಯಾಲಜಿಸ್ಟ್ ಜಯಕುಮಾರ್ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ವಿಡಿಯೋ ಸಾಕ್ಷಿ ಇದೆ. ಆದಾಗ್ಯೂ ಸಂತ್ರಸ್ತೆ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಮಹಿಳೆ ನೀಡಿದ್ದ ದೂರಿಗೆ ಠಾಣೆಗೆ ಕರೆಸಿ ರೆಡಿಯಾಲಜಿಸ್ಟ್ ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆದಾಗ್ಯೂ ಆತನನ್ನು ಬಂಧಿಇಸಿರಲಿಲ್ಲ. ಬಳಿಕ ಕರವೇ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಬಳಿಕ ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಜಯಕುಮಾರ್ ಪತ್ನಿ ಘಟನೆ ನಡೆದ್ 20 ದಿನಗಳ ಬಳಿಕ ಸಂತ್ರಸ್ತೆ ಹನಿಟ್ರ್ಯಾಪ್ ಹಾಗೂ ಹಣ ವಸೂಲಿ ಮಾಡಲು ಬಂದಿದ್ದರೆಂದು ದೂರು ನೀಡಿದ್ದಾರೆ. ಈ ದೂರು ಆಧರಿಸಿ ಈಗ ಸಂತ್ರಸ್ತೆ ವಿರುದ್ಧವೇ ಪ್ರಕರಣ ದಾಖಲಾಗಿದೆ. ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ಮಹಿಳೆ ವಿರುದ್ಧ ಕೇಸ್ ದಾಖಲಾಗಿದ್ದು ಹಣದಾಸೆಗೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
