ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯದಿಂದಾಗಿ ಅಧ್ವಾನ ಮುಂದುವರಿದಿದೆ. ಏರ್ ಪೋರ್ಟ್ ಗಳಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಆರನೇ ದಿನವಾದ ಇಂದು ಕೂಡ ಹಲವು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 61 ಇಂಡಿಗೋ ವಿಮನಗಳು ಇಂದು ರದ್ದಾಗಿವೆ. ಈ ಬಗ್ಗೆ ಪ್ರಯಾಣಿಕರಿಗೆ ಮೊದಲೇ ಯಾವುದೇ ಮಾಹಿತಿಯನ್ನೂ ವಿಮಾನಯಾನ ಸಂಸ್ಥೆ ನೀಡಿಲ್ಲ. ಪ್ರಯಾಣಿಕರು ವಿಮಾನ ಏರಲು ಏರ್ ಪೋರ್ಟ್ ಗೆ ಬಂದಾಗಲೇ ಇಂದಿನ ವಿಮಾನ ಹಾರಾಟವೂ ರದ್ದಾಗಿದೆ ಎಂಬುದು ಗೊತ್ತಾಗಿದೆ. ಪ್ರಯಾಣಿಕರು ಇಂಡಿಗೋ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ದೆಹಲಿ, ಹೈದರಾಬಾದ್, ಕೊಲ್ಕತ್ತಾ, ಮಂಗಳೂರು, ಭೋಪಾಲ್, ಕೊಚ್ಚಿ, ಶ್ರೀನಗರ ಸೇರಿದಂತೆ ಹಲವೆಡೆ ತೆರಳಬೇಕಿದ್ದ ಒಟ್ಟು 61 ಇಂಡಿಗೋ ವಿಮಾನಗಳು ಇಂದು ರದ್ದಾಗಿವೆ ಎಂದು ತಿಳಿದುಬಂದಿದೆ.
