ಬೆಳಗಾವಿ: ಡಿಸೆಂಬರ್ 8ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ವಿಪಕ್ಷ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾರ್ಯತಂತ್ರ ರೂಪಿಸಿದ್ದಾರೆ. ಬಿಜೆಪಿ ರೆಬಲ್ ನಾಯಕರು ಕೂಡ ಒಟ್ಟಾಗಿ ಹೋರಾಡಲು ಮುಂದಾಗಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರೆಬಲ್ ಟೀಂ ಲೀಡರ್, ಶಾಸಕ ರಮೇಶ್ ಜಾರಕಿಹೊಳಿ, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ಆರ್.ಅಶೋಕ್ ಅವರು ಎಲ್ಲಿ ಕರೆಯುತ್ತಾರೆ ಅಲ್ಲಿಗೆ ಹೋಗುತ್ತೇವೆ. ಬಿಜೆಪಿಯಲ್ಲಿ ಎಷ್ಟೇ ಜಗಳಗಳಿದ್ದರೂ ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದೇ ಎಂದರು.
ಪಕ್ಷದ ಚೌಕಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಆರ್.ಅಶೋಕ್ ಕರೆದಲ್ಲಿ ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ರೆಬಲ್ ಟೀಂ ನಿಂದ ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿದ ರಮೇಶ್ ಜಾರಕಿಹೊಳಿ, ವಿಜಯೇಂದ್ರ ಕಳುಹಿಸಿ ಕೊಟ್ಟಿದ್ದಕ್ಕೆ ದೆಹಲಿಗೆ ಹೋಗಿದ್ದೆವು. ಆತ ತಾನೇ ದೆಹಲಿಗೆ ಕಳುಹಿಸಿದ್ದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರೇ ಕಳುಹಿಸಿದ್ದಕ್ಕೆ ನಾವು ದೆಹಲಿಗೆ ಹೋಗಿದ್ದೆವು. ಕೆಲ ಚರ್ಚೆಗಳು ಆಗಿವೆ ಯಾರೊಂದಿಗೆ ಆಗಿದೆ ಎಂಬುದನ್ನು ಈಗ ಬಹಿರಂಗಪಡಿಸಲ್ಲ ಎಂದು ಹೇಳಿದರು.
