ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ತಾಯಿ-ಮಗ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಅಶ್ವತ್ಥಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ತಾಯಿ ಜಯಶ್ರೀ (57) ಹಾಗೂ ಮಗ ಆಕಾಶ್ (32) ಆತ್ಮಹತ್ಯೆಗೆ ಶರಣಾದವರು. ಡೆತ್ ನೋಟ್ ಬರೆದಿಟ್ಟು ಮೊದಲಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ನೋಡಿ ಮಗ ಆಕಾಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆಕಾಶ್ ಮೊದಲ ಪತ್ನಿ ಮೂರು ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಳು. ಆರು ತಿಂಗಳ ಹಿಂದಷ್ಟೇ ಆಕಾಶ್ ಎರಡನೇ ಮದುವೆಯಾಗಿದ್ದ. ಈಗ ಎರಡನೇ ಹಂಡತಿ ಮನೆಯಲ್ಲಿದ್ದಾಗಲೇ ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ-ಮಗನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
