ನವದೆಹಲಿ: ಭಾರತ-ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧ ಹೊಸ ಮೈಲುಗಲ್ಲು. ವಿಶ್ವಕ್ಕೆ ಶಾಂತಿಯ ಸಂದೇಶ ರವಾನಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿಯ ಹೈದರಾಬಾದ್ ಭವನದಲ್ಲಿ ಭಾರತ-ರಷ್ಯಾ ದ್ವಿಪಕ್ಷೀಯ ಮಾತುಕತೆ ವೇಳೆ ಮಾತನಡಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರದೃಷ್ಟಿಯುಳ್ಳನಾಯಕ. ಕಳೆದ 25 ವರ್ಷಗಳಿಂದ ಪುಟಿನ್ ಜೊತೆಗೆ ನನ್ನ ಗೆಳೆತನವಿದೆ. ಪುಟಿನ್ ನನ್ನ ಪ್ರಿಯ ಮಿತ್ರ ಎಂದು ಹೇಳಿದರು.
ಭಾರತ ಹಾಗೂ ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧ ಹೊಸ ಮೈಲುಗಲ್ಲು. ಹಲವು ಒಪ್ಪಂದಗಳಿಗೆ ಉಭಯದೇಶಗಳ ನಡುವೆ ಮಾತುಕತೆ ನಡೆದಿದೆ. ಭಾರತ ಯಾವತ್ತೂ ಶಾಂತಿಯ ಪರವಾಗಿರುತ್ತದೆ. ಭಾರತ ತಟಸ್ಥವಾಗಿಲ್ಲ. ಭಾರತ ಶಾಂತಿ ಬಯಸುತ್ತದೆ. ಶಾಂತಿಯಿಂದ ಮಾತ್ರ ವಿಶ್ವದ ಕಲ್ಯಾಣ ಸಾಧ್ಯ. ಯುದ್ಧಕ್ಕೆ ಶಾಂತಿಯ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದರು.
ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಶಾಂತಿಯುತ ಚರ್ಚೆ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ನಾವು ಯಾವುದೇ ದೇಶದ ಪರ ಮಾತನಾಡುತ್ತಿಲ್ಲ. ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಬೇಕೆಂಬುದಷ್ಟೆ ನಮ್ಮ ಉದ್ದೇಶ. ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
