ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಾಮಾಚಾರ ನಡೆಸಿರುವ ಘಟನೆ ನಡೆದಿದೆ.
ಕ್ರೀಡಾಂಗಾಣದ ಯುವ ಜನ ಮತ್ತು ಕ್ರೀಡಾ ಇಲಾಖೆ ಕಟ್ಟಡದ ಮುಖ್ಯ ದ್ವಾರದಲ್ಲಿ ನಿಂಬೆ ಹಣ್ಣು, ಕೆಂಪು ಬಣ್ಣದ ಅಕ್ಕಿ ಇರಿಸಿ ವಾಮಾಚಾರ ಮಾಡಲಾಗಿದೆ. ಕೆಂಪು ಅಕ್ಕಿಯಲ್ಲಿ ಕ್ರೀಡಾ ಇಲಾಖೆಯ ದ್ವಿತೀಯ ದರ್ಜೆಯ ಸಹಾಯಕ ಅಬ್ದುಲ್ಲ ಅವರ ಹೆಸರು ಬರೆಯಲಾಗಿದೆ.
ಕ್ರೀಡಾಂಗಣದ ಮುಖ್ಯ ಗೇಟ್ ನಿಂದ ವಾಯು ವಿಹಾರ ನಡೆಸುವ ಮಾರ್ಗದುದ್ದಕ್ಕೂ ನಿಂಬೆಹಣ್ಣು, ಕೆಂಪು ಅಕ್ಕಿ ಚಲ್ಲಲಾಗಿದೆ. ಇದನ್ನು ಕಂಡು ವಾಯು ವಿಹಾರಕ್ಕೆ ಬಂದವರು ಶಾಕ್ ಆಗಿದ್ದಾರೆ.
