ಹುಬ್ಬಳ್ಳಿಯಲ್ಲಿ ವಧು –ವರ ಇಲ್ಲದೇ ನಡೀತು ಆರತಕ್ಷತೆ ಸಮಾರಂಭ: ವಿಮಾನ ಟೇಕಾಫ್ ಆಗದ ಕಾರಣ ಆನ್ ಲೈನ್ ನಲ್ಲೇ ಭಾಗಿಯಾದ ಮದು ಮಕ್ಕಳು

ಹುಬ್ಬಳ್ಳಿ: ವಿಮಾನ ಟೇಕಾಫ್ ಆಗದ ಕಾರಣ ಆನ್ಲೈನ್ ನಲ್ಲೇ ಆರತಕ್ಷತೆ ಸಮಾರಂಭದಲ್ಲಿ ಮದು ಮಕ್ಕಳು ಭಾಗಿಯಾಗಿದ್ದಾರೆ.

ಇಂಡಿಗೋ ವಿಮಾನ ಹಾರಾಟ ರದ್ದಾದ ಹಿನ್ನೆಲೆಯಲ್ಲಿ ಆನ್ಲೈನ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಮದು ಮಕ್ಕಳೇ ಬರದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಆನ್ಲೈನ್ ನಲ್ಲಿ ಆರತಕ್ಷತೆ ನಡೆಸಲಾಗಿದೆ.

ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ನವೆಂಬರ್ 23ರಂದು ಭುವನೇಶ್ವರದಲ್ಲಿ ಟೆಕ್ಕಿಗಳ ಮದುವೆಯಾಗಿದೆ. ಹುಬ್ಬಳ್ಳಿಯ ಮೇಧಾ ಮತ್ತು ಭುವನೇಶ್ವರದ ಸಂಗಮದಾಸ್ ಅವರ ಮದುವೆ ನೆರವೇರಿದ್ದು, ಬುಧವಾರ ಹುಬ್ಬಳ್ಳಿಯಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಬಂದು ಬಾಂಧವರು ಸಮಾರಂಭಕ್ಕೆ ಆಗಮಿಸಿದ್ದರು. ಆದರೆ ವಿಮಾನವಿಲ್ಲದೇ ವಧು-ವರರು ಬಾರದ ಕಾರಣ ಆನ್ಲೈನ್ ಲ್ಲಿಯೇ ಭಾಗವಹಿಸಿದ್ದಾರೆ. ವಧು -ವರರೇ ಇಲ್ಲದೆ ಆರತಕ್ಷತೆ ಸಮಾರಂಭದಲ್ಲಿ ಬಂಧು ಬಾಂಧವರು ಭಾಗಿಯಾಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read