ರಾಜಸ್ಥಾನದ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಡಿ. 1ರಿಂದ 4ರವರೆಗೆ ನಡೆದ ಖೇಲೋ ಇಂಡಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸುದೀಪ್ ಪುರುಷರ ಹೈಜಂಪ್ ನಲ್ಲಿ 2.08 ಮೀಟರ್ ಎತ್ತರ ಜಿಗಿದು ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಚಿನ್ನ ಗೆದ್ದ ಸುದೀಪ್ ಅವರನ್ನು ಕುವೆಂಪು ವಿವಿ ಕುಲಸಚಿವ ಎ. ಎಲ್. ಮಂಜುನಾಥ್ ಅಭಿನಂದಿಸಿದರು. ಡಾ. ಎನ್. ಡಿ. ವಿರೂಪಾಕ್ಷ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
