ಕಲಬುರಗಿ: ಲಿವ್ ಇನ್ ಗೆಳತಿಗಾಗಿ ಕಳ್ಳತನಕ್ಕಿಳಿದಿದ್ದ ಪ್ರಿಯಕರ ಸೇರಿ ಇಬ್ಬರು ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಹಾಗೂ ಕಲ್ಲಪ್ಪನಿಗೆ ಸಹಾಯ ಮಾಡುತ್ತಿದ್ದ ಸಂತೋಷ್ ಬಂಧಿತ ಆರೋಪಿಗಳು. ಗೌರ್ ಗ್ರಾಮದ ನಿವಾಸಿಯಾಗಿದ್ದ ಕಲ್ಲಪ್ಪ, ತನ್ನ ಲಿವ್ ಇನ್ ಗೆಳತಿಯ ಖರ್ಚು ನಿಭಾಸಲು ಕಳ್ಳತನ ಮಾಡುತ್ತಿದ. ಒಟ್ಟು ಆರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಆತನಿಗೆ ಸ್ನೇಹಿತ ಸಂತೋಷ್ ಸಾಥ್ ನೀಡಿದ್ದ.
ಬಂಧಿತರಿಂದ 61 ಗ್ರಾಂ ಚಿನ್ನ, 680 ಗ್ರಾಂ ಬೆಳ್ಳಿ ಸೇರಿದಂತೆ ಕದ್ದ ವಸ್ತುಗಳಲ್ಲಿ ಶೇ.70ರಷ್ಟನ್ನು ವಶಕ್ಕೆ ಪಡೆಯಲಾಗಿದೆ.
