ಬೆಂಗಳೂರು: ಬೆಂಗಳೂರು ಪೊಲೀಸರು ಕಳೆದ 11 ತಿಂಗಳಲ್ಲಿ ಬರೋಬ್ಬರಿ 146 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸಾವಿರಾರು ಪ್ರಕರಣಗಳನ್ನು ದಾಖಲಿಸಿಕೊಮ್ಡು ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು ಸಿಸಿಬಿ ಪೊಲೀಸರು ನಡೆಸಿದ ವಿವಿಧ ಕಾರ್ಯಾಚರಣೆಯಲ್ಲಿ 2025ರಲ್ಲಿ 146 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. 11 ತಿಂಗಳಲ್ಲಿ ಬೆಂಗಳೂರಿನಲ್ಲಿಯೇ ಸಾವಿರಾರು ಪ್ರಕರಣ ದಾಖಲಾಗಿದ್ದು, ನೂರಾರು ಆರೋಪಿಗಳನ್ನು ಬಂಧಿಸಲಾಗಿದೆ.
ಚಾಕಲೇಟ್, ಕಾಫಿ ಪುಡಿ, ಪಾರ್ಸಲ್, ಗಿಫ್ಟ್ ಬಾಕ್ಸ್ ಜೊತೆಗೆ ಇಟ್ಟುಕೊಂಡು ಸಾಗಿಸುವುದು ಸೇರಿದಂತೆ ಅನೇಕ ಮಾದರಿಯ ಡ್ರಗ್ಸ್ ಗಳನ್ನು ಸಾಗಾಟ ಮಾಡುತ್ತಿದ್ದ ಪೆಡ್ಲರ್ ಗಳನ್ನು ದೇಶ-ವಿದೇಶಗಳ ಪೆಡ್ಲರ್ ಗಳು, ವಿಶೇಷವಾಗಿ ನೈಜೀರಿಯನ್ನರು, ಕೇರಳ ಮೂಲದವರನ್ನು ಬಂಧಿಸಲಾಗಿದೆ.
19ರಿಂದ 35 ವರ್ಷದ ಯುವಕ, ಯುವತಿಯರೇ ಡ್ರಗ್ ಮಾಫಿಯಾದ ಪ್ರಮುಖ ಟಾರ್ಗೆಟ್ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ನಗರದ ಹೊರವಲಯಕ್ಕೆ ಸೇರಿದ ಪ್ರದೇಶಗಳಲ್ಲಿ ಪೆಡ್ಲರ್ ಗಳು ಸಕ್ರಿಯರಾಗಿದ್ದರು.
