ಮಂಗಳೂರು : ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕನಚೂರು ಕ್ಲಾಕ್ ಟವರ್ ವೃತ್ತ ಉದ್ಘಾಟಿಸಿದರು.
ಮಂಗಳೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಮಂಗಳೂರಿನ ದೇರಳಕಟ್ಟೆ ಸಮೀಪದ ಕನಚೂರು ಕ್ಲಾಕ್ ಟವರ್ ವೃತ್ತವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಬಿ.ಜೆಡ್.ಝಮೀರ್ ಅಹ್ಮದ್ ಖಾನ್, ಕನಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ನ ಪ್ರತಿನಿಧಿಗಳು ಈ ವೇಳೆ ಹಾಜರಿದ್ದರು.
ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆ, ಮಂಗಳಗಂಗೋತ್ರಿಯಲ್ಲಿ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿವಿ ಆಯೋಜಿಸಿದ್ದ “ಶತಮಾನದ ಪ್ರಸ್ತಾನ ನಾರಾಯಣಗುರು – ಮಹಾತ್ಮಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಮತ್ತು ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ, ಸರ್ವಮತ ಸಮ್ಮೇಳನ ಶತಮಾನೋತ್ಸವ, ಯತಿ ಪೂಜೆಯನ್ನು ಉದ್ಘಾಟಿಸಿ, ಗುರುಗಳ ಜೀವನ ಸಂದೇಶವನ್ನು ಸ್ಮರಿಸಿದರು.
ಇಂದು ಮಂಗಳೂರಿನ ದೇರಳಕಟ್ಟೆಯ ಕನಚೂರು ಕ್ಲಾಕ್ ಟವರ್ ವೃತ್ತವನ್ನು ಉದ್ಘಾಟಿಸಿದೆ. pic.twitter.com/oYA2ObXP1R
— Siddaramaiah (@siddaramaiah) December 3, 2025
