ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ -ಶಿಕಾರಿಪುರ ರಸ್ತೆಯ ಹಳೆಜೋಗ -ಜಯನಗರ ಗ್ರಾಮದ ಮಧ್ಯೆ ಟ್ರ್ಯಾಕ್ಟರ್ ಟ್ರೈಲರ್ ಕಳಚಿ ಇಬ್ಬರು ಸಾವನ್ನಪ್ಪಿದ್ದು, ಎಂಟು ಜನ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ಟ್ರೈಲರ್ ಕಳಚಿ ಬಿದ್ದು ಅಪಘಾತ ಸಂಭವಿಸಿದೆ.
ಶಿಕಾರಿಪುರ ತಾಲೂಕು ಅತ್ತಿಬೈಲು ಗ್ರಾಮದ ಕೂಲಿ ಕಾರ್ಮಿಕರಾದ ಗುತ್ಯಪ್ಪ(50), ದುರ್ಗಮ್ಮ(53) ಮೃತಪಟ್ಟವರು. ಅಪಘಾತದಲ್ಲಿ ಲೋಕಮ್ಮ, ಜಯಮ್ಮ, ಮಂಜಮ್ಮ, ನೀಲಪ್ಪ, ಕರಿಯಮ್ಮ, ಕಲ್ಪನಾ, ಕರಿಬಸಪ್ಪ, ದುರ್ಗಮ್ಮ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪ ಗ್ರಾಮದಲ್ಲಿ ಮೆಕ್ಕೆಜೋಳ ತೆನೆ ಮುರಿಯಲು ಅತ್ತಿಬೈಲಿನಿಂದ ಟ್ರ್ಯಾಕ್ಟರ್ ನಲ್ಲಿ ಹೋಗುವಾಗ ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
