ALERT : ಕೆಂಪೇಗೌಡ ಏರ್ ಪೋರ್ಟ್’ನಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ : ಪ್ರಯಾಣಿಕರಿಗೆ ಮಹತ್ವದ ಪ್ರಕಟಣೆ.!

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ತಡರಾತ್ರಿಯಿಂದ 70 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ತಡರಾತ್ರಿಯಿಂದ 22 ವಿಮಾನಗಳ ಹಾರಾಟ ರದ್ದು ಮಾಡಲಾಗಿದ್ದು, 50ಕ್ಕೂ ಅಧಿಕ ವಿಮಾನಗಳ ಹಾರಾಟದ ಸಮಯವನ್ನು ಬದಲಾವಣೆ ಮಾಡಲಾಗಿದೆ.
ಬೆಂಗಳೂರಿನಿಂದ ಟೇಕಾಫ್ ಆಗಬೇಕಿದ್ದ ಕೆಲವು ವಿಮಾನಗಳು ರದ್ದಾಗಿವೆ. ಸಾಫ್ಟ್ವೇರ್ ತಾಂತ್ರಿಕ ಸಮಸ್ಯೆ ಕಾರಣದಿಂದ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ತಡರಾತ್ರಿಯಿಂದ 22 ವಿಮಾನಗಳ ಪ್ರಯಾಣ ರದ್ದು ಮಾಡಲಾಗಿದೆ. ಕೊಲ್ಕತ್ತಾ, ದೆಹಲಿ, ಮುಂಬೈ, ಚೆನ್ನೈ, ವಾರಣಾಸಿ ಮೊದಲಾದ ಕಡೆ ಹಾರಾಟ ನಡೆಸಬೇಕಿದ್ದ 50ಕ್ಕೂ ಅಧಿಕ ವಿಮಾನಗಳ ಸಮಯ ಬದಲಾವಣೆಯಾಗಿದೆ.

ವಿವಿಧ ವಿಮಾನ ನಿಲ್ದಾಣಗಳಲ್ಲಿ ಚೆಕ್-ಇನ್ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ, ಇದರ ಪರಿಣಾಮವಾಗಿ ಏರ್ ಇಂಡಿಯಾ ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳಲ್ಲಿ ವಿಳಂಬವಾಗುತ್ತಿದೆ. ಎಲ್ಲಾ ಪ್ರಯಾಣಿಕರಿಗೆ ಸುಗಮ ಚೆಕ್-ಇನ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ವಿಮಾನ ನಿಲ್ದಾಣ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ವ್ಯವಸ್ಥೆಯು ಹಂತಹಂತವಾಗಿ ಪುನಃಸ್ಥಾಪನೆಯಾಗುತ್ತಿರುವಾಗ, ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗುವವರೆಗೆ ನಮ್ಮ ಕೆಲವು ವಿಮಾನಗಳು ವಿಳಂಬವನ್ನು ಅನುಭವಿಸುತ್ತಲೇ ಇರಬಹುದು. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು https://airindia.com/in/en/manage/flight-status.html ನಲ್ಲಿ ಪರಿಶೀಲಿಸಲು ಮತ್ತು ಅವರ ಪ್ರಯಾಣಕ್ಕೆ ಹೆಚ್ಚುವರಿ ಸಮಯವನ್ನು ನೀಡಲು ನಾವು ವಿನಂತಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಯನ್ನು ನಾವು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ ಎಂದು ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read