ಪುಣೆ: ಟೆಕ್ನಿಷಿಯನ್ ಓರ್ವ ಗೆಳತಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
20 ವರ್ಷದ ದಿವ್ಯಾ ನಿಗೋಟ್ ಕೊಲೆಯಾದ ಯುವತಿ. ಬೀಡ್ ಜಿಲ್ಲೆಯ 21 ವರ್ಷದ ಗಣೇಶ್ ಕೇಲ್ ಗೆಳತಿಯನ್ನೇ ಕೊಂದ ಟೆಕ್ನಿಷಿಯನ್. ಪುಣೆಯ ರೂಬಿ ಹಾಲ್ ಕ್ಲಿನಿಕ್ ನಲ್ಲಿ ಯುವತಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಕ್ಲಿನಿಕ್ ನಲ್ಲಿ ಗನೇಶ್ ಟೆಕ್ನಿಷಿಯನ್ ಆಗಿದ್ದ.
ದಿವ್ಯಾ ನಾಪತ್ತೆಯಾಗಿದ್ದಾಳೆ ಎಂದು ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ತನಿಖೆ ನಡೆಸಿದಾಗ ಪೊಲೀಸರಿಗೆ ಸಂಗಮವಾಡಿ ಪ್ರದೇಶದಲ್ಲಿ ವ್ಯಕ್ತಿ ಮನೆಯಲ್ಲಿ ದಿವ್ಯಾ ಮೃತದೇಹ ಪತ್ತೆಯಾಗಿದೆ ದಿವ್ಯಾಳ ಮೂಗು ಹಾಗೂ ಮುಖಕ್ಕೆ ಗಾಯಗಳಾಗಿತ್ತು. ಇದೇ ವೇಳೆ ಟೆಕ್ನಿಷಿಯನ್ ಗಣೇಶ್ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ದಿವ್ಯಾಳನ್ನು ಹತ್ಯೆಗೈದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
