ಬೆಂಗಳೂರು: ಡಿಸ್ಟಿಲರಿಗಳು ಖರೀದಿಸುವ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್ ಗೆ 2,400 ರೂ. ನಿಗದಿ ಮಾಡಲಾಗಿದೆ.
ಮೆಕ್ಕೆಜೋಳ ಸೇರಿದಂತೆ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳು ನಾಫೆಡ್ ಬದಲಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮೂಲಕ ರೈತರಿಂದ ಪ್ರತಿ ಕ್ವಿಂಟಲ್ ಗೆ 2,400 ರೂ. ದರದಲ್ಲಿ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೇಂದ್ರವು ರಾಜ್ಯದ ಡಿಸ್ಟಿಲರಿಗಳು ಖರೀದಿಸಬೇಕಾಗಿರುವ ಮೆಕ್ಕೆಜೋಳದ ಬಗ್ಗೆ ಎಸ್‌ಒಪಿ ಬಿಡುಗಡೆ ಮಾಡಿದೆ. ಅದರಲ್ಲಿ NCCF ಹಾಗೂ ನಾಫೆಡ್ ಮೂಲಕ ಪ್ರತಿ ಕ್ವಿಂಟಲ್ ಗೆ 2639 ರೂ. ದರ ನಿಗದಿಯಾಗಿದೆ. ಆದರೆ ಮಾರುಕಟ್ಟೆಯಲ್ಲಿ 1600 ರಿಂದ 1,900 ರೂ. ಧಾರಣೆ ಇದೆ. ಹೀಗಾಗಿ 2639 ರೂ.ಗೆ ಖರೀದಿಸಿದರೆ ಸಮಸ್ಯೆ ಆಗುತ್ತದೆ ಎಂದು ಡಿಸ್ಟಲರಿ ಮಾಲೀಕರು ಸರ್ಕಾರಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ 2400 ರೂ.ಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
