ಬೆಂಗಳೂರು: ಸಿಎಂ ಕುರ್ಚಿಗಾಗಿ ಪೈಪೋಟಿ ಜೋರಾಗಿರುವ ನಡುವೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ನನಗೇನೂ ಬೇಡ, ನನಗೇನೂ ಆತುರವೂ ಇಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನನಗೆ ಏನೂ ಬೇಡ, ಯಾವ ಆತುರವೂ ಇಲ್ಲ. ನನ್ನ ಪಕ್ಷ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ನನ್ನ ಪರಿಚಯದವರಿಗೆ ಹುಷಾರಿರಲಿಲ್ಲ. ಹಾಗಾಗಿ ಅವರನ್ನು ನೋಡಲು ಮುಂಬೈಗೆ ಹೋಗಿದ್ದೆ. ನನ್ನ ಜೊತೆ ಸುರೇಶ್ ಕೂಡ ಇದ್ದರು ಎಂದು ಹೇಳಿದರು. ಹೈಕಮಾಂಡ್ ನಾಯಕರು ಕರೆದಾಗ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಇಬ್ಬರೂ ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದರು.
