ಚಿಕ್ಕಮಗಳೂರು: ಷೇರು ಮಾರುಕಟ್ಟೆ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಆನ್ ಲೈನ್ ಮೂಲಕ 72 ವರ್ಷದ ವ್ಯಕ್ತಿಯೋರ್ವರಿಗೆ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿದ ವಂಚಕರು ಶೃಂಗೇರಿ ಮೂಲದ 72 ವರ್ಷದ ಶಂಕರ್ ನಟರಾಜನ್ ಎಂಬುವವರಿಗೆ ಬರೋಬ್ಬರಿ 3 ಕೋಟಿ.27 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟಿಸ್ ಹೆಸರಲ್ಲಿ ಶಂಕರ್ ನಟರಾಜನ್ ಅವರಿಗೆ ವಾಟ್ಸಪ್ ಮೆಸೆಜ್ ಬಂದಿತ್ತು. ನೀವು ಹೂಡಿಕೆ ಮಾಡ್ದ ಹಣ ಲಾಭ ಬಂದಿದೆ. ನಿಮ್ಮ ಖತಎಯಲ್ಲಿ 9 ಕೋಟಿ ಹಣವಿದ್ದು ಅದನ್ನು ಪಡೆಯಲು ನೀವು 1 ಕೋಟಿ 9 ಲಕ್ಷ ರೂಪಾಯಿ ಕಮಿಷನ್ ಹಾಅಕಬೇಕು ಎಂದು ವಂಚಕರು ಬೇದಿಕೆ ಇಟ್ಟಿದ್ದರು. ಇದನ್ನು ನಂಬಿದ ಶಂಕರ್ ನಟರಾಜನ್ ಅವರಿಂದ ವಂಚಕರು ಹಂತ ಹಂತವಾಗಿ 3 ಕೋಟಿ 27 ಲಕ್ಷ ಹಣ ದೋಚಿದ್ದಾರೆ. ಲಾಭಾಂಶದ ಹಣ ಪಡೆಯಲು ಸಾದ್ಯವಾಗದಿದ್ದಾಗ ಶಂಕರ್ ನಟರಾಜನ್ ಮಹಾರಾಷ್ಟ್ರದ ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನಕಲಿ ಖಾತೆ ತೆರೆದು ವಂಚಕರು ತನ್ನನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ಶಂಕರ್ ನಟರಾಜನ್ ಚಿಕ್ಕಮಗಳೂರು ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.
