ಚಿತ್ತೋರಗಢ್ ಚಿನ್ನದ ವ್ಯಕ್ತಿ ಕನ್ಹಯ್ಯ ಲಾಲ್ ಗೆ 5 ಕೋಟಿ ನೀಡುವಂತೆ ಬೆದರಿಕೆ: ಚಿನ್ನ ಧರಿಸುವಂತಿಲ್ಲ ಎಂದು ಎಚ್ಚರಿಕೆ!

ಜೈಪುರ: ಸಾದಾ ಕಾಲ ಕೆಜಿ ಗಟ್ಟಲೇ ಮೈಮೇಲೆ ಚಿನ್ನ ಧರಿಸಿ ಓಡಾಡುವ ರಾಜಸ್ಥಾನದ ಚಿತ್ತೋರಗಢದ ವ್ಯಾಪಾರಿ ಕನ್ಹಯ್ಯ ಲಾಲ್ ಖತಿಕ್ ಗೆ 5 ಕೋಟಿ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಹಣ್ಣಿನ ವ್ಯಾಪಾರಿಯಾಗಿರುವ ಕನ್ಹಯ್ಯ ಲಾಲ್ ಚಿತ್ತೋರಗಢದ ಬಪ್ಪಿ ಲಹರಿ ಎಂದೇ ಖ್ಯಾತಿಯಾಗಿದ್ದಾರೆ. ಚಿನ್ನಾಭರಣಗಳ ಪ್ರಿಯ ಕನ್ಹಯ್ಯ ಲಾಲ್ ಗೆ ಗ್ಯಾಂಗ್ ಸ್ಟರ್ ರೋಹಿತ್ ಗೋದರಾ ಗ್ಯಾಂಗ್ ನವರು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ವಾಟ್ಸಪ್ ಮೂಲಕ ಕರೆ ಮಾಡಿರುವ ದುಷ್ಕರ್ಮಿಗಳು ಕನ್ನಯ್ಯ ಲಾಲ್ ಗೆ ಇನ್ಮುಂದೆ ನೀನು ಚಿನ್ನ ಧರಿಸುವಂತಿಲ್ಲ. ಒಪ್ಪದಿದ್ದರೆ 5 ಕೋಟಿ ಪರಿಹಾರ ನೀಡಬೇಕು ಎಂದು ಬೆದರಿಕೆ ಹಾಕಿದೆ. ಈ ಬಗ್ಗೆ ಕನ್ಹಯ್ಯ ಲಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕನ್ಹಯ್ಯ ಲಾಲ್ 50 ವರ್ಷಗಳ ಹಿಂದೆ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇದೀಗ ಅವರ ಬಳಿ 3.5 ಕೆಜಿ ಚಿನ್ನವಿದೆ. ಸದಾ ಕಾಲ ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿ ಓಡಾಡುವ ಕನ್ಹಯ್ಯ ಲಾಲ್ ರನ್ನು ಚಿತ್ತೋರಗಢ ಚಿನ್ನದ ವ್ಯಕ್ತಿ ಎಂದೇ ಕರೆಯುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read