ದಾವಣಗೆರೆ: ಪೋಕ್ಸೋ ಪ್ರಕರಣದ ಮೊದಲ ಕೇಸ್ ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಿರ್ದೋಷಿ ಎಂದು ಚಿತ್ರದುರ್ಗ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದಿಂದ ಖುಲಾಸೆಗೊಳಿಸಿದೆ.
ಪೋಕ್ಸೋ ಕೇಸ್ ನಲ್ಲಿ ಖುಲಾಸೆ ಬೆನ್ನಲ್ಲೇ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಶ್ರೀ, ನಾವು ಇನ್ನಷ್ಟು ದಿನಗಳ ಕಾಲ ಮೌನವಾಗಿರುತ್ತೇವೆ. ಈಗ ಮಾತನಾಡುವ ಸಮಯ ಕಡಿಮೆಯಿದೆ. ಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ಎಲ್ಲರಿಗೂ ಸಂವಿಧಾನದ ದಿನದ ಶುಭಾಷಯಗಳು. ಈಗ ಯಾವುದೇ ಉತ್ತರ ನೀಡಲ್ಲ. ಮುಂದೆ ಮಾಧ್ಯಮಗೋಷ್ಠಿ ನಡೆಸಿ ಎಲ್ಲರನ್ನೂ ಕರೆದು ಮಾತನಾಡುತ್ತೇನೆ. ಈಗ ಇಷ್ಟು ಸಾಕು ಹೆಚ್ಚಿಗೆ ಮಾತನಡುವುದಿಲ್ಲ ಎಂದು ಹೇಳಿದರು.
