ಲಖನೌ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತ ಸಭೆಗೆ ಗೈರಾಗಿದ್ದಕ್ಕೆ ಅಮಾನತುಗೊಂಡ ಹಿನ್ನೆಲೆಯಲ್ಲಿ ಮನನೊಂದ ಅಧಿಕಾರಿ ಮದುವೆಗೆ ಒಂದು ದಿನ ಮೊದಲು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸುಧೀರ್ ಕುಮಾರ್ (25) ಆತ್ಮಹತ್ಯೆಗೆ ಶರಣಾದ ಗುಮಾಸ್ತ. ಮದುವೆಗೆ ಒಂದು ದಿನ ಇರುವಾಗ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆ ಸಿದ್ಧತೆಯಲ್ಲಿದ್ದಿದ್ದರಿಂದ ಎಸ್ ಐಆರ್ ಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಸಭೆಗೆ ಗೈರಾಗಿದ್ದಕ್ಕೆ ಸುಧೀರ್ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ವರನಿಗೆ ಸಸ್ಪೆಂಡ್ ಆಗಿ ಕೆಲಸ ಕಳೆದ್ಕೊಂಡಿದ್ದು ಆಘತವನ್ನುಂಟುಮಾಡಿದೆ. ನೋವು, ಅವಮಾನದಿಂದ ನೊಂದ ಸುಧೀರ್ ನೇಣಿಗೆ ಕೊರಳೊಡ್ಡಿದ್ದಾರೆ.
ಅಮಾನತಾಗಿದ್ದಕ್ಕೆ ಸಹೋದರ ತೀವ್ರವಾಗಿ ನೊಂದಿದ್ದ. ಈಗ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಸುಧೀರ್ ಸಹೋದರಿ ಪೊಲೀಸರುಗೆ ದೂರು ನೀಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರೀಷ್ಕರಣೆಗೆ ಡ್ಸೆಂಬರ್ ೪ರ ಗಡುವು ನೀಡಿರುವ ಬೆನ್ನಲ್ಲೇ ವಿವಿಧ ರಾಜ್ಯಗಳಲ್ಲಿ ಪರಿಷ್ಕರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
