ಇಂಫಾಲ: 40 ಕೆಜಿ ಸ್ಫೋಟಕ ಹೊಂದಿರುವ ಸುಧಾರಿತ ರಾಕೆಟ್ ಪತ್ತೆಯಾಗಿರುವ ಘಟನೆ ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ನಡೆದಿದೆ.
ಗೆಲ್ಮೋಲ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ರಾಕೆಟ್ ಪತ್ತೆಯಾಗಿದೆ. ರಾಕೆಟ್ ಜೊತೆ ಉಡಾವಣ ಅಸ್ಟ್ಯಾಂದ್ ಮತ್ತು ಬ್ಯಾಟರಿ ಕೂಡಿ ಪತ್ತೆಯಾಗಿದ್ದು, ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದಾರೆ.
ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ಒಂದು ಜರ್ಮನ್ ರೈಫಲ್, ಎರಡು ಬೋಲ್ಟ್ ಆಕ್ಷನ್ ರೈಫಲ್, ಸುಧಾರಿತ ಮಾರ್ಟರ್, ಎರಡು ಹ್ಯಾಂಡ್ ಗ್ರ್ಯಾನೆಡ್, ಡಿಟೋನೇಟರ್ ಗಳು ಸೇರಿವೆ.
