ಬೆಂಗಳೂರು : ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಾಗಿದ್ದಾರೆ. ಇವರ ಮುಖ್ಯ ಜವಾಬ್ದಾರಿಗಳು ತಾಲ್ಲೂಕು ಪಂಚಾಯತ್ನ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ.
ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರ ಜವಾಬ್ದಾರಿಗಳೇನು..? ಇಲ್ಲಿದೆ ಮಾಹಿತಿ
- ಯೋಜನೆಗಳನ್ನು ಗ್ರಾಮ ಪಂಚಾಯತಿಗಳು ಸಕಾಲದಲ್ಲಿ ಸಿದ್ಧಪಡಿಸಿ, ತಾಲ್ಲೂಕು ಪಂಚಾಯತಿಗೆ ಸಲ್ಲಿಸುವುದನ್ನು ಪಡಿಸುವುದು. ಯೋಜನೆಯಡಿ ನಿಗದಿಪಡಿಸಿದ ಮಾನದಂಡಗಳನ್ನು ಅಳವಡಿಸಿಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಿರುವುದರ ಮೇಲ್ವಿಚಾರಣೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವುದು.
- ಪಂಚಾಯತಿ ಮತ್ತು ಅನುಷ್ಠಾನ ಇಲಾಖೆಗಳು ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ನಿಗದಿತ ಕಾಲಮಿತಿಯೊಳಗೆ ಕೂಲಿ ಪಾವತಿಸುವುದನ್ನು ಮೇಲ್ವಿಚಾರಣೆ ಮಾಡುವುದು | 4, ಮತ್ತು ವಿಳಂಬ ಕೂಲಿ ಪಾವತಿ ಸಂದರ್ಭದಲ್ಲಿ
ಶಾಸನಬದ್ಧ ಗ್ರಾಮಸಭೆ ಮತ್ತು ಇತರೆ ಗ್ರಾಮ ಸಭೆಗಳು, ಗ್ರಾಮ ಪಂಚಾಯತಿ ಸಭೆಗಳು, ಕೆ.ಡಿ.ಪಿ. ಸಭೆ. ಉಪ-ಸಮಿತಿ ಸಭೆಗಳನ್ನು ಗ್ರಾಮ ಪಂಚಾಯತಿವಾರು ಕ್ರಮಬದ್ಧವಾಗಿ ನಡೆಸುವ ಕುರಿತು ಮೇಲ್ವಿಚಾರಣೆ ಮಾಡುವುದು. - ಗ್ರಾಮ ಪಂಚಾಯತಿ ಅಧ್ಯಕ್ಷ/ಉಪಾಧ್ಯಕ್ಷ/ಸದಸ್ಯರುಗಳ ಖಾಲಿ ಸ್ಥಾನ ಮತ್ತು ಇನ್ನಿತರೆ ಚುನಾವಣಾ ವಿಷಯಗಳ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸುವುದರ ಮೇಲ್ವಿಚಾರಣೆ.
- ಗ್ರಾಮ ಪಂಚಾಯತಿವಾರು ಕಟ್ಟಡ/ಭೂಮಿಗಳ ತೆರಿಗೆ ದರಗಳ ನಿರ್ಧರಣೆ, ಪರಿಷ್ಕರಣೆ ಹಾಗೂ ಕ್ರಮಬದ್ಧಗೊಳಿಸುವುದರ ಮಾಡುವುದು. ಮೇಲ್ವಿಚಾರಣೆ
ಗ್ರಾಮ ಪಂಚಾಯತಿವಾರು ತೆರಿಗೆ / ಶುಲ್ಕಗಳ ಸಂಗ್ರಹಣೆ (ಡಿ.ಸಿ.ಬಿ) ಮತ್ತು ವಸೂಲಾತಿಯ ಬಗ್ಗೆ ಮೇಲ್ವಿಚಾರಣೆ.






