HomeLatest Newsಟೇಕಾಫ್ ಗೆ ಮೀಸಲಿಟ್ಟ ರನ್ ವೇಗೆ ಬಂದಿಳಿದ ಅಪ್ಘಾನ್ ವಿಮಾನ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಟೇಕಾಫ್ ಗೆ ಮೀಸಲಿಟ್ಟ ರನ್ ವೇಗೆ ಬಂದಿಳಿದ ಅಪ್ಘಾನ್ ವಿಮಾನ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ನವದೆಹಲಿ: ಟೇಕಾಫ್ ಗೆ ಮೀಸಲಿಟ್ಟ ರನ್ ವೇ ಗೆ ಅಪ್ಘಾನ್ ವಿಮಾನವೊಂದು ಬಂದಿಳಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕಾಬೂಲ್ ನಿಂದ ಬಂದ FG 311 ವಿಮಾನ ಭಾನುವಾರ ಮಧ್ಯಾಹ್ನ 12:7ಕ್ಕೆ ರನ್ ವೇ 29R ನಲ್ಲಿ ಬಂದು ಲ್ಯಾಂಡ್ ಆಗಿದೆ. ಆ ಸಮಯದಲ್ಲಿ ಬೇರೆ ಯಾವುದೇ ವಿಮಾನ ಟೇಕಾಫ್ ಆಗುವುದು ಇರಲಿಲ್ಲವಾದ್ದರಿಂದ ಸ್ವಲ್ಪದಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನ್ ಜೆಟ್ ವಿಮಾನ ರನ್ ವೇನಲ್ಲಿ ತಪ್ಪಾಗಿ ಇಳಿದಿದೆಯೇ? ಅಥವಾ ವಾಯು ಸಂಚಾರ ನಿಯಂತ್ರಕರ ಸೂಚನೆ ಮೇರೆಗೆ ಲ್ಯಾಂಡ್ ಮಾಡಲಾಗಿತ್ತೇ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular