BIG NEWS: ಕೆಲಸದ ಒತ್ತಡ: ಡೆತ್ ನೋಟ್ ಬರೆದಿಟ್ಟು ಮಹಿಳಾ ಅಧಿಕಾರಿ ಆತ್ಮಹತ್ಯೆ

ಕೋಲ್ಕತ್ತಾ: ಕೆಲಸ ಒತ್ತಡದಿಂದ ಭಯಗೊಂಡ ಮಹಿಳಾ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದಿದೆ.

ರಿಂಕು ತರಫ್ದಾರ್ (54) ಆತ್ಮಹತ್ಯೆಗೆ ಶರಣಾದವರು. ಬಿಎಲ್ ಒ ಕೆಲಸದಿಂದ ಒತ್ತಡಕ್ಕೊಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಂಕು ತರಫ್ದಾರ್ ಬಂಗಾಳಿ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಇತ್ತೀಚೆಗೆ ಅವರಿಗೆ ಬಿಎಲ್ ಒ ಕೆಲಸ ನೀಡಲಾಗಿತ್ತು. ಬಿಎಲ್ ಒ ಕೆಲಸ ತನ ತೀವ್ರ ಒತ್ತಡವಾಗುತ್ತಿದೆ ಎಂದು ಮನ್ರೆಯಲ್ಲಿ ಹಲವುಬಾರಿ ಹೇಳಿದ್ದರು. ಕೆಲಸ ಬಿಡುವುದಾಗಿಯೂ ಹೇಳುತ್ತಿದ್ದರಂತೆ. ಆದರೆ ಈಗ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನಗೆ ಬಿಎಲ್ ಒ ಕೆಲಸ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನಿಭಾಯಿಸದಿದ್ದರೆ ಆಡಳಿತಾತ್ಮಕ ಒತ್ತಡ ಬರುತ್ತದೆ. ಅದನ್ನು ನನಗೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

ರಿಂಕು ಸಾವಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಬಂಗಾಳದಲ್ಲಿ ನಡೆಯುತ್ತಿರುವ ಎಸ್ ಐಆರ್ ನಿಲ್ಲಿಸುವಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸಿದ್ದಾರೆ. ಯೋಜಿತವಲ್ಲದ, ಒತ್ತಾಯಪೂರ್ವಕ ಕೆಲಸಗಳು ಜೀವಗಳಿಗೆ ಅಪಾಯವನ್ನುಂಟುಮಾಡುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಕೈಬಿಡಬೇಕು. ಎಸ್ ಐಆರ್ ಪ್ರಾರಂಭವಾದಾಗಿನಿಂದ ಪಶ್ಚಿಮ ಬಂಗಾಳದಲ್ಲಿ 28 ಜನರು ಒತ್ತಡದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಭಯ, ಒತ್ತಡ ಹಾಗೂ ಅಧಿಕ ಕೆಲಸದಿಂದಾಗಿ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read