HomeLatest NewsBIG NEWS: ಶಾಲೆ ಮೇಲೆ ಬಂದೂಕುಧಾರಿಗಳ ದಾಳಿ: 200ಕ್ಕೂ ಹೆಚ್ಚು ಮಕ್ಕಳ ಅಪಹರಣ

BIG NEWS: ಶಾಲೆ ಮೇಲೆ ಬಂದೂಕುಧಾರಿಗಳ ದಾಳಿ: 200ಕ್ಕೂ ಹೆಚ್ಚು ಮಕ್ಕಳ ಅಪಹರಣ

ಅಬುಜಾ: ಕ್ಯಾಥೋಲಿಕ್ ಶಾಲೆಯೊಂದರ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದು, 200ಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.

ಸೇಂಟ್ ಮೇರಿ ಶಾಲೆಯ ಮೇಲೆ ದಾಳಿ ನಡೆಸಿರುವ ಬಂದೂಕುಧಾರಿಗಳು 215 ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ತಮ್ಮ ವಶಕ್ಕೆ ಪಡೆದು ಅಪಹರಿಸಿದ್ದಾರೆ. ಈ ಬಗ್ಗೆ ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ತಿಳಿಸಿದೆ.

ಅಪಹರಣಕ್ಕೊಳಗಾಗಿರುವ ಮಕ್ಕಳು ಹಾಗೂ ಶಿಕ್ಷಕರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಾವು ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಸ್ಥಳೀಯ ಆಡಳಿತದ ವಕ್ತಾರ ಡೇನಿಯಲ್ ಅಟೋರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular