ಬೆಂಗಳೂರು: ಪೊಲಿಸ್ ಅಧೀಕ್ಷಕರು(ಎಸ್.ಪಿ.) ಹಾಗೂ ಮೇಲ್ಪಟ್ಟ ರ್ಯಾಂಕ್ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಲಾಗಿದೆ.
ಎಸ್ಪಿ, ಮೇಲ್ಪಟ್ಟ ಅಧಿಕಾರಿಗಳಿಗೆ ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಶೇಷ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನಿಷೇಧಾಜ್ಞೆ ಮತ್ತು ಆರೋಪಿಗಳಿಗೆ ಬಾಂಡ್ ಸೇರಿ ವಿಶೇಷ ಸಂದರ್ಭದಲ್ಲಿ ಇದರಿಂದ ಅನುಕೂಲವಾಗಲಿದೆ ಎನ್ನಲಾಗಿದೆ.
