ರಾಮನಗರ: ಬೇಟೆಯಾಡಲು ಹೋಗಿದ್ದ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ಗುಂಡು ತಗುಲಿದ ಪರಿಣಾಮ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಪಾಂಡುರಂಗ(35) ಮೃತಪಟ್ಟ ವ್ಯಕ್ತಿ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಕೆಬ್ಬೆಪಾಳ್ಯ ಗ್ರಾಮದ ಬಳಿ ಘಟನೆ ನಡೆದಿದೆ. ಪಾಂಡುರಂಗ ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದು, ಇದನ್ನು ತೆಗೆದುಕೊಂಡು ಸ್ನೇಹಿತ ಕಿರಣ್ ಜತೆಗೆ ಬೆಳಗಿನ ಜಾವ ಜಮೀನಿನಲ್ಲಿ ಕಾಡುಪ್ರಾಣಿ ಬೇಟೆಯಾಡಲು ತೆರಳಿದ್ದರು. ಈ ವೇಳೆ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ತಗುಲಿದೆ. ರಕ್ತಸ್ರಾವದಿಂದ ಪಾಂಡುರಂಗ ಮೃತಪಟ್ಟಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
