ಬೆಂಗಳೂರು: ಬೆಂಗಳೂರು ಹಾಗೂ ಮೈಸೂರು ವಿಭಾಗದ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಗ್ರೂಪ್-ಬಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ಉಪಪ್ರಾಂಶುಪಾಲರ ಹುದ್ದೆಗೆ ಬಡ್ತಿ ಸಂಬಂಧ ಕೌನ್ಸೆಲಿಂಗ್ ನಡೆಯಲಿದೆ.
ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ತತ್ಸಮಾನ ವೃಂದದ ಹುದ್ದೆಯಿಂದ ಪ್ರೌಢಶಾಲಾ ಗ್ರೂಪಿಂದದ ಹುದ್ದೆಗಳಿಗೆ ಬಡ್ತಿ ನೀಡಲು ಮುಖ್ಯ ಶಿಕ್ಷಕರ ಹುದ್ದೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಆನ್ಲೈನ್ ಕೌನ್ಸೆಲಿಂಗ್ ನಿಗದಿಪಡಿಸಲಾಗಿದೆ.
ಮೈಸೂರು ವಿಭಾಗದ ಕೌನ್ಸೆಲಿಂಗ್ ಡಿಸೆಂಬರ್ 10ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಬೆಂಗಳೂರು ವಿಭಾಗದ ಕೌನ್ಸೆಲಿಂಗ್ ಡಿಸೆಂಬರ್ 11ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಸದರಿ ಆನ್ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆಗೆ ಆಯಾ ಉಪ ನಿರ್ದೇಶಕರು(ಆಡಳಿತ) ಅವರ ಕಚೇರಿಗೆ ಹಾಜರಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಿಳಿಸಿದೆ. ಈ ಸಂಬಂಧ ಎರಡು ವಿಭಾಗಗಳ ಕೌನ್ಸೆಲಿಂಗ್ ಹಾಜರಾಗುವವರ ತಾತ್ಕಾಲಿಕ ಅದ್ಯತಾ ಪಟ್ಟಿಯನ್ನು ಡಿಸೆಂಬರ್ 6ರಂದು ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ತಿಳಿಸಿದೆ.

