ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ 53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ ಹಾಗೂ ವಜ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಒಂದು ವಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ 53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ, ವಜ್ರಗಳು ಪತ್ತೆಯಾಗಿವೆ. ಪ್ರಕರಣಗಳ ಸಂಬಂಧ ಒಟ್ಟು 20 ಜನರನ್ನು ಬಂಧಿಸಲಾಗಿದೆ.
ಆರಂಭದಲ್ಲಿ ಏಳು ಪ್ರತ್ಯೇಕ ಪ್ರಕರಣಗಳಲ್ಲಿ 25.318 ಕೋಟಿ ಮೌಲ್ಯದ 25.318 ಕೆಜಿ ಹೈಡ್ರೋಜನ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಏಳು ಜನರನ್ನು ಬಂಧಿಸಲಾಗಿದೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಮತ್ತೆ ಏಳು ಪ್ರಕರಣಗಳಲ್ಲಿ 26.981 ಕೋಟಿ ಮೌಲ್ಯದ 26.981ಕೆಜಿ ಹೈಡ್ರೋಜನ್ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಎಂಟು ಜನರನ್ನು ಬಂಧಿಸಲಾಗಿದೆ.
ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ನಾಲ್ವರು ಪ್ರಯಣಿಕರನ್ನು ಬಂಧಿಸಲಾಗಿದ್ದು, 65.57 ಲಕ್ಷ ಮೌಲ್ಯದ 24 ಕ್ಯಾರೆಟ್ ಚಿನ್ನ ಜಪ್ತಿ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ 54.13 ಲಕ್ಷ ಮೌಲ್ಯದ ವಜ್ರವನ್ನು ಜಪ್ತಿ ಮಾಡಲಾಗಿದೆ.
