BREAKING : ಬೆಂಗಳೂರಲ್ಲಿ 7 ಕೋಟಿ ‘ದರೋಡೆ ಕೇಸ್’ ಗೆ ಬಿಗ್ ಟ್ವಿಸ್ಟ್ : ಮಾಸ್ಟರ್ ಮೈಂಡ್ ‘ಪೊಲೀಸ್ ಕಾನ್ಸ್ಟೇಬಲ್’ ಅರೆಸ್ಟ್.!

ಬೆಂಗಳೂರು : ಬೆಂಗಳೂರಲ್ಲಿ 7 ಕೋಟಿ ರೂ ದರೋಡೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಾಸ್ಟರ್ ಮೈಂಡ್ ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್ ಆಗಿದ್ದಾನೆ.

ಹೌದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ದರೋಡೆಯ ಮಾಸ್ಟರ್ ಮೈಂಡ್ ಓರ್ವ ಪೊಲೀಸ್ ಕಾನ್ಸ್ಟೇಬಲ್ ಎಂಬ ಶಂಕೆ ವ್ಯಕ್ತವಾಗಿದೆ.

ಹೌದು ರಾಬರಿ ಕೇಸ್ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಎಂಬುವವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಅಣ್ಣಪ್ಪ ನಾಯ್ಕ್ ರಾಬರಿ ಮಾಡಲು ಹುಡುಗರ ಗ್ಯಾಗ್ ರೆಡಿ ಮಾಡಿದ್ದನು. ಕಳ್ಳತನ ಹೇಗೆ ಮಾಡಬೇಕು.? ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಈತ ಹುಡುಗರಿಗೆ ಟ್ರೈನಿಂಗ್ ಕೂಡ ಕೊಟ್ಟಿದ್ದನು. ಈತನ ಪ್ಲ್ಯಾನ್ ನಂತೆ ಹುಡುಗರು 7.11 ಕೋಟಿ ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ಉದ್ಯೋಗಿಗಳು ಕೂಡ ದರೋಡೆಗೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ.ಒಟ್ಟಿನಲ್ಲಿ ಪೊಲೀಸರು ಪ್ರಕರಣದ ತನಿಖೆ ಚುರುಗೊಳಿಸಿದ್ದು, ಶೀಘ್ರವೇ ಎಲ್ಲಾ ಆರೋಪಿಗಳನ್ನ ಹೆಡೆಮುರಿ ಕಟ್ಟಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read