ಕಾರವಾರ: ತಂದೆ ಮಾಡಿದ ಸಾಲದ ತಪ್ಪಿಗೆ 10 ವರ್ಷದ ಮಗಳ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯವೆಸಗಿರುವ ನೀಚ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತೀನ್ ಎಂಬಾತ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ಬಾಲಕಿಯ ತಂದೆ ಸಂಘದಿಂದ ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡದೇ ಸತಾಯಿಸುತ್ತಿದ್ದನಂತೆ. ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಲು ಆರೋಪಿ ಮತೀನ್, ಬಾಲಕಿ ಮನೆಬಳಿ ಹೋಗಿದ್ದಾನೆ. ಈ ವೇಳೆ ಬಾಲಕಿ ತಂದೆ ಮನೆಯಲ್ಲಿ ಇರಲಿಲ್ಲ. ಬಾಲಕಿಯೊಬ್ಬಳೇ ಮನೆ ಅಂಗಳದಲ್ಲಿ ಆಟವಾಡುತ್ತಿದ್ದಳು. ಬಾಲಕಿ ಬಳಿ ತಂದೆ ಎಲ್ಲಿ ಎಂದು ಕೇಳಿದ್ದಾನೆ. ಆಕೆ ಮನೆಯಲ್ಲಿ ಇಲ್ಲ ಎಂದಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಆರೋಪಿ, ಬಾಲಕಿಯನ್ನು ಬಲವಂತವಾಗಿ ಎಳೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಮನೆಗೆ ಬಂದ ಬಳಿಕ ಬಾಲಕಿ ತಾಯಿ ಬಳಿ ವಿಷಯ ಹೇಳಿದ್ದು, ಬಾಲಕಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
