ಮೀರತ್ : ಉತ್ತರ ಪ್ರದೇಶದ ಮೀರತ್ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ವೈದ್ಯರು ಮಗುವಿನ ಕಣ್ಣಿನ ಗಾಯಕ್ಕೆ ಫೆವಿಕ್ವಿಕ್ ಹಾಕಿ ಬ್ಯಾಂಡೇಜ್ ಸುತ್ತಿದ ಘಟನೆ ನಡೆದಿದೆ.
ಎರಡೂವರೆ ವರ್ಷದ ಮಗುವಿನ ಕಣ್ಣಿನ ಬಳಿ ಆದ ತೀವ್ರವಾದ ಗಾಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವ ಬದಲು ಖಾಸಗಿ ಆಸ್ಪತ್ರೆಯ ವೈದ್ಯರು ಫೆವಿಕ್ವಿಕ್ ಹಾಕಿ ಬ್ಯಾಂಡೇಜ್ ಸುತ್ತಿದ್ದಾರೆ. ಕಿಂಚಿತ್ತೂ ತಿಳುವಳಿಕೆ ಇಲ್ಲದೇ ವೈದ್ಯರು ನಿರ್ಲಕ್ಷ್ಯ ತೋರಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪರೀತ ನೋವಿನ ಹಿನ್ನೆಲೆ ಪೋಷಕರು ಮಗುವನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದಿರು. ವೈದ್ಯರ ಮೂರು ಗಂಟೆಗಳ ಪ್ರಯತ್ನದ ನಂತರ ಅಂಟು ತೆಗೆಯಲಾಯಿತು. ಈ ವಿಚಾರವು ಈಗ ಆರೋಗ್ಯ ಇಲಾಖೆಯನ್ನು ತಲುಪಿದ್ದು, ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ.
