ಚಿಕ್ಕಬಳ್ಳಾಪುರ : ‘ಬುದ್ದಿವಂತ’ ಸಿನಿಮಾ ಶೈಲಿಯಲ್ಲಿ ಮಹಿಳೆಯರಿಗೆ ವಂಚಿಸುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಈ ಮಹಾಮೋಸ ನಡೆದಿದೆ.
ಹತ್ತಾರು ಮಹಿಳೆಯರಿಗೆ ವಂಚನೆ ಎಸಗಿದ ಆರೋಪಿ ಗಿರೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮರು ಮದುವೆಯ ಹೆಸರಿನಲ್ಲಿ ಈತ ದೋಖಾ ಎಸಗುತ್ತಿದ್ದನು. ಅವಿವಾಹಿತ ಒಂಟಿ ಶ್ರೀಮಂತ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರು.
ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಯ ಮೂಲಕ ಮಹಿಳೆಯರಿಗೆ ಗಾಳ ಹಾಕಿ ಅವರನ್ನ ಮದುವೆಯಾಗಿ ಲೈಂಗಿಕ ಸಂಪರ್ಕ ಬೆಳೆಸಿ , ಅದನ್ನ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ನಂತರ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದನು. ಹೀಗೆ ಹತ್ತಾರು ಮಹಿಳೆಯರಿಗೆ ಈತ ಮೋಸ ಮಾಡಿದ್ದು, ಸಂತ್ರಸ್ತ ಮಹಿಳೆಯರು ಪೊಲೀಸರ ಮೊರೆ ಹೋಗಿದ್ದಾರೆ.
ಅವಿವಾಹಿತ ಒಂಟಿ ಮಹಿಳೆಯರು ಹಾಗೂ ಶ್ರೀಮಂತ ಮಹಿಳೆಯರನ್ನ ಈತ ಟಾರ್ಗೆಟ್ ಮಾಡಿಕೊಂಡಿದ್ದನು. ಮಹಿಳೆಯರನ್ನ ಮದುವೆ ಆಗುತ್ತೇನೆ ಎಂದು ನಂಬಿಸಿ ಅವರ ಜೊತೆ ಲಿವಿಂಗ್ ಟು ಗೆದರ್ ನಲ್ಲಿದ್ದು ನಂತರ ಲೈಂಗಿಕ ಸಂಪರ್ಕ ಬೆಳೆಸಿ ವಿಡಿಯೋ ಸೆರೆ ಹಿಡಿದು ಮೋಸ ಮಾಡುತ್ತಿದ್ದನು.
