ಬೆಂಗಳೂರು: ಬೀದಿ ನಾಯಿ ದಾಳಿಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.
ಬೀದಿ ನಾಯಿ ಕಚ್ಚಿ ಗಾಯಗೊಂಡವರಿಗೆ ಸರ್ಕಾರದಿಂದ 5,000 ರೂ. ಪರಿಹಾರ ನೀಡಲಾಗುವುದು. 3000 ರೂಗಳನ್ನು ಗಾಯಾಳುವಿಗೆ ನೀಡಲಿದ್ದು, 1500 ರೂ.ಗಳನ್ನು ಚಿಕಿತ್ಸಾ ವೆಚ್ಚವಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ನೀಡಲು ಸೂಚಿಸಲಾಗಿದೆ.
ಬೀದಿ ನಾಯಿ ದಾಳಿಯಿಂದ ವ್ಯಕ್ತಿ ಮೃತಪಟ್ಟಲ್ಲಿ ಅಥವಾ ರೇಬಿಸ್ ಕಾಯಿಲೆಗೆ ತುತ್ತಾದಲ್ಲಿ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗ್ರೇಟರ್ ಬೆಂಗಳೂರಿನ ಎಲ್ಲಾ ಪಾಲಿಕೆಗಳಿಗೆ ಅನ್ವಯವಾಗುವಂತೆ ಮಾತ್ರ ಈ ಆದೇಶ ಹೊರಡಿಸಲಾಗಿದೆ.

